News Hour: ಕಾಂಗ್ರೆಸ್‌ ಗ್ಯಾರಂಟಿಗೆ ದಿನಕ್ಕೆ ಒಂದೊಂದು ನಿಯಮ!

Jun 8, 2023, 11:00 PM IST

ಬೆಂಗಳೂರು (ಜೂ. 8): ಗೃಹಜ್ಯೋತಿ ಬಳಿಕ ಗೃಹಲಕ್ಷ್ಮಿ ಯೋಜನೆಗೂ ದಿನಬೆಳಗಾದರೆ ಒಂದೊಂದು ನಿಯಮವನ್ನು ಸರ್ಕಾರ ಸೇರಿಸುತ್ತಿದೆ. ಹೊಸ ನಿಯಮದ ಪ್ರಕಾರ, ಮಕ್ಕಳು ತೆರಿಗೆ ಪಾವತಿಸುತ್ತಿದ್ದರೆ ಅಂಥ ತಾಯಂದಿರರಿಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಸಿಗೋದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಸಿಎಂ ಸಿದ್ಧರಾಮಯ್ಯ ಅವರೊಂದಿಗೆ ನಡೆದ ಸಭೆಯ ಬಳಿಕ ಹೇಳಿದ್ದಾರೆ.

ಇಲ್ಲಿಯವರೆಗೂ ಪತಿ ಐಟಿ ಅಥವಾ ಜಿಎಸ್‌ಟಿ ತೆರಿಗೆ ಕಟ್ಟುತ್ತಿದ್ದರೆ ಅಂಥವರಿಗೆ 2 ಸಾವಿರ ರೂಪಾಯಿ ಸಿಗೋದಿಲ್ಲ ಎಂದು ತಿಳಿಸಲಾಗಿತ್ತು. ಆದರೆ, ಗುರುವಾರ ಹೊಸ ನಿಯಮವನ್ನು ಸೇರಿಸಲಾಗಿದ್ದು, ಮಕ್ಕಳು ತೆರಿಗೆ ಕಟ್ಟುತ್ತಿದ್ದರೂ ಅವರಿಗೆ ಗೃಹಲಕ್ಷ್ಮೀಯ 2 ಸಾವಿರ ರೂಪಾಯಿ ಬರೋದಿಲ್ಲ ಎಂದು ಹೇಳಲಾಗಿದೆ.

ಗೋಳ್ವಾಳ್ಕರ್‌, ಸಾವರ್ಕರ್‌ ಫೇಕ್‌ ದೇಶಭಕ್ತರು, ಅವರ ಪಾಠ ನಮಗ್ಯಾಕೆ: ಕುಂವೀ!

ಇದರ ನಡುವೆ, ರಾಜ್ಯದಿಂದ ಏಕೈಕ ಕಾಂಗ್ರೆಸ್‌ ಸಂಸದರಾಗಿರುವ ಡಿಕೆ ಸುರೇಶ್‌ ರಾಜಕೀಯ ವೈರಾಗ್ಯದ ಮಾತನಾಡಿದ್ದಾರೆ. ಇದರ ಬೆನ್ನಲ್ಲಿಯೇ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡೋದಿಲ್ವಾ ಅನ್ನೋ ಅನುಮಾನ ಕಾಡಿದೆ. ಅದಕ್ಕೆ ಕಾರಣ ಅವರು ಇಂದು ಆಡಿರುವ ಮಾತಿಗಳು!