ರೆಡ್ ಝೋನ್ ವಿಂಗಡಣೆಯಲ್ಲಿ ಗೊಂದಲ: ಕೇಂದ್ರದ ಪ್ರಕಾರ 3, ರಾಜ್ಯದ ಪ್ರಕಾರ 14..!

May 2, 2020, 2:01 PM IST

ಬೆಂಗಳೂರು(ಮೇ.02): ಎರಡನೇ ಲಾಕ್‌ಡೌನ್ ಮೇ 03 ಮುಕ್ತಾಯವಾಗಲಿದ್ದು ಮೇ.04ರಿಂದ 17ರವರೆಗೆ ಮೂರನೇ ಹಂತದ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಝೋನ್ ವಿಂಗಡನೆಯಲ್ಲಿ ಗೊಂದಲ ಆರಂಭವಾಗಿದೆ. 

ಕೇಂದ್ರ ಸರ್ಕಾರದ ಪ್ರಕಾರ ರಾಜ್ಯದಲ್ಲಿ ಕೇವಲ 3 ರೆಡ್ ಝೋನ್‌ನಲ್ಲಿವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ಮಾತ್ರ ರೆಡ್‌ ಝೋನ್ ವ್ಯಾಪ್ತಿಗೆ ಬರುತ್ತವೆ. ಆದರೆ ರಾಜ್ಯಗಳ ಪ್ರಕಾರ 14 ರೆಡ್‌ ಝೋನ್‌ಗಳು ಕರ್ನಾಟಕದಲ್ಲಿವೆ. ಈ ಗೊಂದಲವನ್ನು ಸುವರ್ಣ ನ್ಯೂಸ್ ಬಗೆಹರಿಸುವ ಪ್ರಯತ್ನ ಮಾಡಿದೆ.

ಕೊರೋನಾಗೆ ಬಲಿ ಆದ ಭಾರತೀಯರಲ್ಲಿ ಶೇ.65 ಪುರುಷರು!

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜತೆ ಮುಖ್ಯಮಂತ್ರಿ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯಕ್ಕೆ ರೆಡ್‌ ಝೋನ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ.