ಸೋನಿಯಾ ಗಾಂಧಿ ರಕ್ಷಣೆಗೆ ಪೊಲೀಸರ ಮೇಲೆ ಒತ್ತಡ ಹಾಕಿದ್ರಾ ಡಿಕೆಶಿ?

Jun 2, 2020, 10:18 AM IST

ಬೆಂಗಳೂರು (ಜೂ. 02): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ದೂರು ದಾಖಲಾಗಿದೆ. ಸೋನಿಯಾ ಗಾಂಧಿ ರಕ್ಷಣೆಗೆ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವಕೀಲರಾದ  ಯೋಗೇಂದ್ರ ಹಾಗೂ ನರೇಂದ್ರ ದೂರು ಸಲ್ಲಿಸಿದ್ದಾರೆ. 

 

ಸೋನಿಯಾ ಗಾಂಧಿ ವಿರುದ್ಧ ಸಾಗರದಲ್ಲಿ ದೂರು ದಾಖಲಾಗಿತ್ತು. ತನಿಖೆಯಲ್ಲಿ ಬಿ ರಿಪೊರ್ಟ್ ಸಲ್ಲಿಸಲು ಡಿಕೆಶಿ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಎಫ್‌ಐಆರ್ ಹಾಕಿದ ಅಧಿಕಾರಿಯ ಅಮಾನತ್ತಿಗೆ ಒತ್ತಾಯಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.  ಡಿಕೆಶಿ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಪಡಿಸಿದ್ದಾರೆ.