ಸಿ.ಎಂ.ಇಬ್ರಾಹಿಂ (CM Ibrahim) ಕೋಪದಲ್ಲಿ ಪಕ್ಷ ಬಿಡುವ ಮಾತನಾಡುತ್ತಿದ್ದಾರಷ್ಟೇ ಹೊರತು ಅವರು ಪಕ್ಷ ಬಿಡುವುದಿಲ್ಲ. ಅವನ ಕೋಪ ಕಡಿಮೆಯಾಗಲಿ, ಆಮೇಲೆ ಭೇಟಿ ಮಾಡಿ ಮಾತನಾಡುತ್ತೇನೆ. ಬಿರಿಯಾನಿ ತಿನ್ನೋಕೆ ಅವನೇ ಕರೆಯುತ್ತಾನೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಬೆಂಗಳೂರು (ಜ. 30): ‘ಕಾಂಗ್ರೆಸ್‌ಗೆ ನಾನು ಬೇಡ ಎಂಬ ತೀರ್ಮಾನವನ್ನು ಕಾಂಗ್ರೆಸ್‌ನವರು ಮಾಡಿದ್ದಾರೆ. ಹೀಗಾಗಿ ನನಗೂ ಕಾಂಗ್ರೆಸ್‌ಗೂ ಸಂಬಂಧ ಮುಗಿದಿದೆ. ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಯಾವ ಪಕ್ಷ ಸೇರುತ್ತೇನೆ ಎಂಬುದನ್ನು ಮುಂದೆ ನೋಡಿ' ಎಂದು ಪರಿಷತ್ ಪ್ರತಿಪಕ್ಷ ಸ್ಥಾನ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ (CM Ibrahim) ಆಕ್ರೋಶದ ಮಾತುಗಳನ್ನಾಡಿದ್ದಾರೆ.