ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ (Campaign) ಸಿಎಂ ಬೊಮ್ಮಾಯಿ (Basavaraj Bommai) ಭಾಷಣ ಮಾಡುತ್ತಿದ್ದಾಗ, ಭಾಷಣದ ವೇಳೆ ದುರ್ವತನೆ ತೋರಿದ್ದಾರೆಂದು ಪೊಲೀಸರ ವಿರುದ್ಧ ಸಿಎಂ ಬೊಮ್ಮಾಯಿ ಗರಂ ಆದರು.
ಬೆಂಗಳೂರು (ಡಿ. 06): ಬೀದರ್ (Bidar) ಪರಿಷತ್ ಅಖಾಡದಲ್ಲಿ ಸಂಬಂಧಿಕರ ನಡುವೆ ಬಿಗ್ ಫೈಟ್ ಶುರುವಾಗಿದೆ. ಬಿಜೆಪಿಯಿಂದ ಪ್ರಕಾಶ್ ಖಂಡ್ರೆ (Prakash Khandre) ಕಣಕ್ಕಿಳಿದರೆ, ಭೀಮರಾವ್ ಪಾಟೀಲ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ ಸಿಎಂ ಬೊಮ್ಮಾಯಿ ಪ್ರಚಾರಕ್ಕಿಳಿದಿದ್ದಾರೆ.
ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಸಿಎಂ ಬೊಮ್ಮಾಯಿ ಭಾಷಣ ಮಾಡುತ್ತಿದ್ದಾಗ, ಭಾಷಣದ ವೇಳೆ ದುರ್ವತನೆ ತೋರಿದ್ದಾರೆಂದು ಪೊಲೀಸರ ವಿರುದ್ಧ ಸಿಎಂ ಬೊಮ್ಮಾಯಿ ಗರಂ ಆದರು.
' ನಮ್ಮದು ಶಿಸ್ತಿನ ಪಕ್ಷ. ನಮ್ಮ ಕಾರ್ಯಕರ್ತರು ಎಲ್ಲವನ್ನು ನೋಡಿಕೊಳ್ಳುತ್ತಾರೆ. ನಿಮ್ಮ ಅಗತ್ಯವಿಲ್ಲ ನಮ್ಮ ಕಾರ್ಯಕರ್ತರು ಎಲ್ಲಾ ನೋಡ್ಕೊಳ್ತಾರೆ, ನೀವು ಹೋಗಿ' ಎಂದು ಕಾರ್ಯಕ್ರಮದಿಂದ ಲೇಡಿ ಪಿಎಸ್ಐಗೆ ಗೆಟ್ ಔಟ್ ಅಂದು ಬಿಟ್ಟರು.ಸಿಎಂ ಭಾಷಣದ ವೇದಿಕೆ ಮೆಟ್ಟಿಲ ಮೇಲೆ ಅನವಶ್ಯಕವಾಗಿ ಮಹಿಳಾ ಪಿಎಸ್ಐ ಸುತ್ತಾಡಿದ್ದಕ್ಕೆ ಸಿಎಂ ಈ ರೀತಿ ಗರಂ ಆದರು.