ಮುಸ್ಲಿಂ ಅಂಗಡಿಗಳ ತೆರವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. 'ಹಿಂದೂ ಸಂಘಟನೆಗಳ ಹೆಸರಲ್ಲಿ ಹೀನ ಕೃತ್ಯ ಎಸಗುತ್ತಿದ್ದಾರೆ. ಇಂತಹ ಕೃತ್ಯಗಳು ಖಂಡನೀಯ: ಎಚ್‌ಡಿ ಕುಮಾರಸ್ವಾಮಿ
ಬೆಂಗಳೂರು (ಏ. 10): ಮುಸ್ಲಿಂ ಅಂಗಡಿಗಳ ತೆರವಿಗೆ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ. 'ಹಿಂದೂ ಸಂಘಟನೆಗಳ ಹೆಸರಲ್ಲಿ ಹೀನ ಕೃತ್ಯ ಎಸಗುತ್ತಿದ್ದಾರೆ. ಇಂತಹ ಕೃತ್ಯಗಳು ಖಂಡನೀಯ. ಇಂತವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಸಾಮರಸ್ಯ ಕದಡುವವರು ರೌಡಿಗಳು. ಇದಕ್ಕೆ ಕಡಿವಾಣ ಹಾಕಬೇಕು ಎಂದು ಕುಮಾರಸ್ವಾಮಿಯವರು, ಸಿಎಂ ಬೊಮ್ಮಾಯಿಗೆ ಒತ್ತಾಯಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿರುವ ಹಿಂದೂಯೇತರ ಅಂಗಡಿಗಳನ್ನು ತೆರವುಗೊಳಿಸುವ ಅಭಿಯಾನ ಇದೀಗ ಧಾರವಾಡದಲ್ಲಿ ತೀವ್ರ ಬಿಸಿ ಪಡೆದುಕೊಂಡಿದ್ದು, ಇಲ್ಲಿಯ ಪ್ರತಿಷ್ಠಿತ ನುಗ್ಗಿಕೇರಿ ಹನುಮಂತನ ದೇವಸ್ಥಾನದ ಆವರಣದಲ್ಲಿನ ನಾಲ್ಕು ಮುಸ್ಲಿಂ ಅಂಗಡಿಗಳನ್ನು ಶನಿವಾರ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಕ್ಷಕಶಃ ಧ್ವಂಸ ಮಾಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.