vuukle one pixel image

ಜೂಜು ಅಡ್ಡೆ ಮೇಲೆ ದಾಳಿ ಮಾಡಿ ಕ್ವಾರಂಟೈನ್ ಸೇರಿದ ಪೊಲೀಸರು!

May 25, 2020, 1:53 PM IST

ಶಿರಗುಪ್ಪ(ಮೇ.25): ಕೊರೋನಾ ಸೋಂಕಿತನಿದ್ದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇದೀಗ ಪೊಲೀಸರು ಕ್ವಾರಂಟೈನ್‌ಗೆ ಒಳಗಾಗಿರುವ ಘಟನೆ ಶಿರಗುಪ್ಪಾದಲ್ಲಿ ನಡೆದಿದೆ.

ಗ್ರಾಮವೊಂದರಲ್ಲಿ ಕೆಲವು ವ್ಯಕ್ತಿಗಳು ಜೂಜಾಡುತ್ತಿರುವ ಖಚಿತ ಮಾಹಿತಿ ತಿಳಿದು ದಾಳಿ ನಡೆಸಿ 12 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಚಿಟಗುಪ್ಪ ಠಾಣೆಯ CPI ಇಬ್ಬರು PSI ಸೇರಿದಂತೆ 15 ಮಂದಿ ಪೊಲೀಸರು ಇದೀಗ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ರಂಜಾನ್ ಹಬ್ಬದಲ್ಲಿ ಸಾಮಾಜಿಕ ಅಂತರ ಮರೆತ ಹುಬ್ಬಳ್ಳಿ ಮಂದಿ

ಪೊಲೀಸ್ ದಾಳಿಯ ವೇಳೆ ಕೊರೋನಾ ಸೋಂಕಿತ ಎಸ್ಕೇಪ್ ಆಗಿದ್ದ. ಟ್ರಾವೆಲ್ ಹಿಸ್ಟರಿಯಲ್ಲಿ ಸೋಂಕಿತ ಇಸ್ಪೀಟ್ ಆಡಿದ್ದು ಪತ್ತೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.