
ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಸೀಕ್ರೆಟ್ ರೂಂನಲ್ಲಿ ಮಹಾ ಸಂಚು ನಡೆದಿತ್ತು. ಇದೇ ಕೋಣೆಯಲ್ಲಿ ಚಿನ್ನಯ್ಯನ 25 ಸಂದರ್ಶನ ವಿಡಿಯೋ ರೆಕಾರ್ಡ್ ಮಾಡಲಾಗಿತ್ತು. ಚಿನ್ನಯ್ಯ ಅರೆಸ್ಟ್ ಆದರೆ, ಪರಾರಿಯಾದರೆ, ತಿರುಗಿಬಿದ್ದರೆ, ಹೀಗೆ ಮೂರು ಹಂತದ ವಿಡಿಯೋದಲ್ಲಿ 3 ವಿಡಿಯೋ ರಿಲೀಸ್ ಆಗಿದೆ.
ಧರ್ಮಸ್ಥಳ ವಿರುದ್ಧ ಸಂಚು ಮಹೇಶ್ ಶೆಟ್ಟಿ ತಿಮರೋಡಿ ಮನೆಯ ಸೀಕ್ರೆಟ್ ರೂಂನಲ್ಲಿ ನಡೆದಿತ್ತು ಅನ್ನೋದು ಬಯಲಾಗಿದೆ. ಈ ಸೀಕ್ರೆಟ್ ರೂಂಲ್ಲಿ ಚಿನ್ನಯ್ಯನ 25ಕ್ಕೂ ಹೆಚ್ಚು ಸಂದರ್ಶನ ನಡೆದಿವೆ. 25ರ ಪೈಕಿ ಈಗಾಗಲೇ ಮೂರು ಸಂದರ್ಶನ ರಿಲೀಸ್ ಆಗಿವೆ. ಚಿನ್ನಯ್ಯ ಅರೆಸ್ಟ್ ಆದ್ರೆ, ಚಿನ್ನಯ್ಯ ಪರಾರಿಯಾದ್ರೆ. ಚಿನ್ನಯ್ಯ ತಿರುಗಿಬಿದ್ದರೆ ಇಂಥ ಹಂತದಲ್ಲಿ ಕೆಲವು ಸಂದರ್ಶನಗಳ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದರು. ಅದರ ಭಾಗವಾಗೇ ಚಿನ್ನಯ್ಯ ಅರೆಸ್ಟ್ ಆಗ್ತಿದ್ದಂತೆ 3 ಸಂದರ್ಶನ ಬಿಡುಗಡೆ ಮಾಡಿದ್ದಾರೆ. ತಾವು ಎಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರಿಕೆ ಹೆಜ್ಜೆ ಇಡಲು ಮಹಾ ಸಂಚು ಹೆಣೆದಿತ್ತು.