Sep 8, 2021, 3:15 PM IST
ಚಿಕ್ಕಮಗಳೂರು (ಸೆ. 08): ಇಲ್ಲಿನ ದಂಟರಮಕ್ಕಿ ನಿವಾಸಿ ವಿಜಯ್‌ಗೆ ಹುಟ್ಟಿನಿಂದ ಮಾತು ಬರಲ್ಲ. 25 ವರ್ಷಗಳಿಂದ ವಾಚ್-ಗಡಿಯಾರ ರಿಪೇರಿಯ ವೃತ್ತಿ ಜೊತೆ ಹಲವು ರೀತಿಯ ಗಡಿಯಾರಗಳ ಆವಿಷ್ಕಾರ ಮಾಡೋದು ಇವರ ಹವ್ಯಾಸ. ನೀರಲ್ಲಿ ಓಡೋ ಗಡಿಯಾರ, ಮರಳಿನ ಗಡಿಯಾರ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿ, ಅವುಗಳನ್ನು ಮಾರಾಟ ಮಾಡುತ್ತಾ ಬದುಕು ಕಟ್ಟಿಕೊಂಡರು.
ಕೋವಿಡ್‌ನಿಂದ ಉದ್ಯೋಗ ಹೋಯ್ತು, ಸ್ವಾವಲಂಬನೆಗಾಗಿ ಕೈ ಕೆಸರು ಮಾಡಿಕೊಂಡ ಶಿಕ್ಷಕ.!
ಇವರಿಗೆ ಟವರ್ ಕ್ಲಾಕ್ ಮಾಡ್ಬೇಕು ಅನ್ನೋದು ಲೈಫ್ ಟೈಂ ಡ್ರೀಮ್. ಅದಕ್ಕಾಗಿ ಏಳು ವರ್ಷಗಳಿಂದ ಗೂಗಲ್, ಯೂಟ್ಯೂಬ್‌ಗಳಲ್ಲಿ ಹುಡುಕಿ ಅಲ್ಲಿ ನೋಡಿದಂತೆ ಸ್ಕೆಚ್ ಹಾಕಿಕೊಂಡು ಇಂದು ಅದೇ ರೀತಿ ತಯಾರಿಸಿದ್ದಾರೆ. ಕಾರು, ಬೈಕ್, ಸೈಕಲ್, ಲಾರಿಯ ವೇಸ್ಟ್ ಪಾರ್ಟ್ಸ್, ಬೋರ್‌ವೆಲ್ ಪೈಪ್, ಸ್ಟೀಲ್ ಪಾತ್ರೆ ಸೇರಿದಂತೆ ಸುಮಾರು 50-60 ಕೆ.ಜಿಯ ಕಬ್ಬಿಣದಿಂದ ಟವರ್ ಕ್ಲಾಕ್ ನಿರ್ಮಿಸಿ ಸೈ ಎನ್ನಿಸಿಕೊಂಡಿದ್ದಾರೆ. ದಿನಕ್ಕೊಮ್ಮೆ ಕೀ ಕೊಟ್ರೆ ಗಂಟೆಗೊಮ್ಮೆ ಅಲರಾಮ್ ಕೂಡ ಬಾರಿಸುತ್ತೆ..! ಈ ಟವರ್ ಕ್ಲಾಕ್‌ನ ಧರ್ಮಸ್ಥಳಕ್ಕೆ ಕೊಡ್ಬೇಕು ಅನ್ನೋದು ವಿಜಯ್ ಆಸೆ.