ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೇಸ್‌ನಲ್ಲಿ (Praveen Nettru Case) ಸರ್ಕಾರದ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಆ. 01): ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೇಸ್‌ನಲ್ಲಿ (Praveen Nettru Case) ಸರ್ಕಾರದ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಕರ್ನಾಟಕ ಬಿಜೆಪಿ ಅತಿರೇಕದ ಕ್ಷಣಗಳನ್ನು ಎದುರಿಸುತ್ತಿದೆ. ಅಧಿಖಾರಕ್ಕೆ ಬಂದಾಗಿನಿಂದ ಬಿಜೆಪಿ ರಾಜ್ಯ ಘಟಕ ಸರಣಿ ವೈಫಲ್ಯ ಎದುರಿಸಿದೆ. ಕಾರ್ಯಕರ್ತರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಕಾರ್ಯಕರ್ತರು ರಾಜೀನಾಮೆ ಕೊಟ್ಟರೂ ಚಿಂತಿಸುತ್ತಿಲ್ಲ. ಹೋದರೆ ಹೋಗಲಿ, ಮತ್ತೊಬ್ಬರು ಬರ್ತಾರೆ ಅನ್ನೋ ಧೋರಣೆ ಸರಿಯಲ್ಲ. ಕಳೆದ 3 ವರ್ಷಗಳಿಂದ ನಮ್ಮ ಕಾರ್ಯಕರ್ತರು ಆಕ್ರೋಶ ಹೊಂದಿದ್ದರು. ಅದು ಈಗ ಹೊರ ಬಂದಿದೆ. ನಮ್ಮ ಸರ್ಕಾರ ಎಚ್ಚೆತ್ತುಕೊಳ್ಳಬೇಕಾದ ಸಮಯ. ನಮ್ಮ ರಕ್ಷಣೆಯನ್ನು ಸರ್ಕಾರ ಮಾಡುತ್ತಿಲ್ಲ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು' ಎಂದು ಅಸಮಾಧಾನ ಹೊರ ಹಾಕಿದ್ದಾರೆ.