Sep 25, 2023, 10:32 PM IST
ಕಾವೇರಿ ನದಿ ನೀರು ಹಂಚಿಕೆ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾವೇರಿ ನದಿ ನೀರು ಪ್ರಾಧಿಕಾರ, ಕಾವೇರಿ ನೀರು ನಿಯಂತ್ರಣ ಮಂಡಳಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಿರುದ್ಧವಾಗಿ ಆದೇಶ ನೀಡಲಾಗಿದೆ. ಕರ್ನಾಟಕಕ್ಕೆ ಅಗುತ್ತಿರುವ ಅನ್ಯಾಯದ ವಿರುದ್ಧ ನಾಳೆ ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಶುಕ್ರವಾರ ಕರ್ನಾಟಕ ಬಂದ್‌ದೆ ಕರೆ ನೀಡಲಾಗಿದೆ. ಬಂದ್ ವಿಚಾರದಲ್ಲಿ ಎರಡು ಬಣದ ನಡುವಿನ ಕಿತ್ತಾಟದಿಂದ ಎರೆಡೆರಡು ಬಂದ್ ನಡೆಸಲು ಸಂಘಟನೆಗಳು ನಿರ್ಧರಿಸಿದೆ. ಕಾವೇರಿ ನದಿ ಹಂಚಿಕೆಯಲ್ಲಿ ತಮಿಳುನಾಡು ಎಲ್ಲಾ ಹಂತದಲ್ಲೂ ಗೆಲುವು ಸಾಧಿಸಿ ನೀರು ಪಡೆದುಕೊಂಡಿದೆ. ಹೆಜ್ಜೆ ಹೆಜ್ಜೆಗೂ ಕರ್ನಾಟಕಕ್ಕೆ ಅನ್ಯಾವಾಗುತ್ತಿರುವುದೇಕೆ? ಕರ್ನಾಟಕ ಮಾಡಿದ ಯಡವಟ್ಟೇನು?