ಹಲಾಲ್, ಜಟ್ಕಾ ಬಳಿಕ ಈಗ ಹಿಂದೂ ಸಂಘಟನೆಗಳಿಂದ ಅಕ್ಷಯ ತೃತೀಯ ಅಭಿಯಾನ!

Apr 24, 2022, 7:44 PM IST

ಬೆಂಗಳೂರು (ಏ.24): ಧರ್ಮ ದಂಗಲ್ ನ ಮುಂದುವರಿದ ಭಾಗವಾಗಿ ಮುಂಬರುವ ಅಕ್ಷಯ ತೃತೀಯದಂದು (Akshaya Tritiya ) ಹಿಂದೂಗಳು (Hindu)ಹಿಂದುಗಳ ಮಾಲೀಕತ್ವದ ಆಭರಣ ಮಳಿಗೆಯಲ್ಲೇ  (jewelry Shop) ಚಿನ್ನವನ್ನು (Gold) ಖರೀದಿ ಮಾಡಬೇಕು ಎನ್ನುವ ಅಭಿಯಾನವನ್ನು ಶ್ರೀರಾಮ ಸೇನೆ (Sri Rama Sene)ಆರಂಭಿಸಿದೆ.

ಹಲಾಲ್ ಹಾಗೂ ವ್ಯಾಪಾರ ಸಂಘರ್ಷದ ಬಳಿಕ, ಅಕ್ಷಯ ತೃತೀಯಕ್ಕೆ ಹೊಸ ಅಭಿಯಾನ ಆರಂಭವಾಗಿದೆ. ಅಕ್ಷಯ ತೃತೀಯ ಚಿನ್ನ ಖರೀದಿ ಸಂಭಂಧ ಆರಂಭವಾಗಿರೋ ಟ್ವಿಟರ್ (Twitter) ಅಭಿಯಾನಕ್ಕೆ ಶ್ರೀರಾಮ ಸೇನೆಯ ಸಂಪೂರ್ಣ ಬೆಂಬಲ ಇದೆ. ಹೀಗಾಗಿ ಅಕ್ಷಯ ತೃತೀಯಕ್ಕೆ ಹಿಂದೂಗಳ ಆಭರಣ ಮಳಿಗೆಯಲ್ಲೇ ಖರೀದಿ ಮಾಡಿ ಎಂದು ಕರೆ ನೀಡಿದರು.

ಧರ್ಮ ದಂಗಲ್: ಹಿಂದೂಗಳ ಅಂಗಡಿಗಳಲ್ಲೇ ಚಿನ್ನ ಖರೀದಿಗಾಗಿ ಅಭಿಯಾನ

ಬಾಗಲಕೋಟೆಯಲ್ಲಿ ಮಾತನಾಡಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, "ಮೇ 3 ರಂದು ನಡೆಯಲಿರುವ ಅಕ್ಷಯ ತೃತೀಯ ದಿನ, ಕೇರಳ ಮೂಲದ ಮುಸ್ಲೀಮರ ಆಭರಣ ಮಳಿಗೆಯಲ್ಲಿ ಚಿನ್ನ ಖರೀದಿ ಬೇಡ. ಕೇರಳ ಮೂಲದ ಮುಸ್ಲಿಂ ಆಭರಣ ಮಳಿಗೆ ರಾಜ್ಯದಲ್ಲಿ ಪ್ರಖ್ಯಾತವಾಗಿದೆ. ಯಾವುದೇ ಕಾರಣಕ್ಕೂ ಈ ಮಳಿಗೆಗಳಲ್ಲಿ ಚಿನ್ನವನ್ನು ಖರೀದಿ ಮಾಡಬೇಡಿ' ಎಂದು ಹೇಳಿದ್ದಾರೆ.