ಸಚಿವ ಉಮೇಶ ಕತ್ತಿ (Umesh Katti) ಅವರ ಬೆಳಗಾವಿ (Belagavi) ನಿವಾಸದಲ್ಲಿ ಜಾರಕಿಹೊಳಿ ಸಹೋದರರು ಮತ್ತವರ ಆಪ್ತರನ್ನು ಹೊರತುಪಡಿಸಿ ಜಿಲ್ಲೆಯ ಸಂಸದರು, ಶಾಸಕರು ಸಭೆ ನಡೆಸಿದ್ದು ತೀವ್ರ ಸಂಚಲನ ಮೂಡಿಸಿದೆ.
ಬೆಂಗಳೂರು (ಜ. 24): ಸಚಿವ ಉಮೇಶ ಕತ್ತಿ (Umesh Katti) ಅವರ ಬೆಳಗಾವಿ (Belagavi) ನಿವಾಸದಲ್ಲಿ ಜಾರಕಿಹೊಳಿ ಸಹೋದರರು ಮತ್ತವರ ಆಪ್ತರನ್ನು ಹೊರತುಪಡಿಸಿ ಜಿಲ್ಲೆಯ ಸಂಸದರು, ಶಾಸಕರು ಸಭೆ ನಡೆಸಿದ್ದು ತೀವ್ರ ಸಂಚಲನ ಮೂಡಿಸಿದೆ.
ಮುಂಬರಲಿರುವ ಸಂಪುಟ ಸಭೆ ವಿಸ್ತರಣೆ, ನಿಗಮ-ಮಂಡಳಿ ರಚನೆ ಬಗ್ಗೆ ನಿರಂತರ 3 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ರಮೇಶ್ ಜಾರಕಿಹೊಳಿಗೆ ಮಂತ್ರಿ ಸ್ಥಾನ ತಪ್ಪಿಸಿ ಅಭಯ್ ಪಾಟೀಲ್ ಅಥವಾ ರಾಜೀವ್‌ರನ್ನು ಮಂತ್ರಿ ಮಾಡಲು ಲಾಬಿ ನಡೆದಿದೆ ಎನ್ನಲಾಗಿದೆ.
ಜೊತೆಗೆ ಇತ್ತೀಚೆಗಷ್ಟೇ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಗೆಲವು ಸಾಧಿಸಿರುವುದು ಮತ್ತು ಬಿಜೆಪಿ ಹೀನಾಯ ಸೋಲನುಭವಿಸಿರುವ ವಿಚಾರ ಕೂಡ ಪ್ರಸ್ತಾವವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷ ವ್ಯಕ್ತಿಗತವಾಗಿ ಹೋಗದೆ ಪಕ್ಷಕ್ಕೆ ಸೀಮಿತವಾಗಲಿ. ಇಲ್ಲವಾದಲ್ಲಿ ಪಕ್ಷಕ್ಕೆ ಧಕ್ಕೆಯಾಗಲಿದೆ ಎಂದು ಸಭೆಯಲ್ಲಿದ್ದ ಹಲವು ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.