ಸಚಿವ ಸಂಪುಟ ರಚನೆಗೆ ಹೈಕಮಾಂಡ್ 3 ಸೂತ್ರ ಸಿದ್ಧಪಡಿಸಿದ್ದಾರೆ. ಎಷ್ಟು ಹಂತ, ಎಷ್ಟು ಜನ ಹಾಗೂ ಪ್ರಾದೇಶಿಕವಾರು ಸೂತ್ರದಡಿ ಸಂಪುಟ ರಚನೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ಹೇಳಿದ್ದಾರೆ.
ಬೆಂಗಳೂರು (ಜು. 02): ಸಚಿವ ಸಂಪುಟ ರಚನೆಗೆ ಹೈಕಮಾಂಡ್ 3 ಸೂತ್ರ ಸಿದ್ಧಪಡಿಸಿದ್ದಾರೆ. ಎಷ್ಟು ಹಂತ, ಎಷ್ಟು ಜನ ಹಾಗೂ ಪ್ರಾದೇಶಿಕವಾರು ಸೂತ್ರದಡಿ ಸಂಪುಟ ರಚನೆಯಾಗಲಿದೆ ಎಂದು ಸಿಎಂ ಬೊಮ್ಮಾಯಿ ದೆಹಲಿಯಲ್ಲಿ ಹೇಳಿದ್ದಾರೆ. ಇಂದು ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಸಿಎಂ ಬೊಮ್ಮಾಯಿ ಭೇಟಿಯಾಗಲಿದ್ದಾರೆ. ಒಂದು ವೇಳೆ ಇಂದು ಲಿಸ್ಟ್ ಫೈನಲ್ ಆದರೆ ಬುಧವಾರ ಪ್ರಮಾಣ ವಚನ ನಡೆಯಲಿದೆ ಎನ್ನಲಾಗುತ್ತಿದೆ.