JDS ರಾಜ್ಯಾಧ್ಯಕ್ಷ ಸ್ಥಾನ C.M ಇಬ್ರಾಹಿಂ ಹೆಗಲಿಗೆ.?

Apr 4, 2022, 12:56 PM IST

ಬೆಂಗಳೂರು (ಏ.04): ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲಿದ್ದಾರೆ ಸಿಎಂ ಇಬ್ರಾಹಿಂ (CM Ibrahim) ಜೆಡಿಎಸ್ ತೊರೆದು ಬಿಜೆಪಿ ಸೇರಲಿದ್ದಾರೆ ಬಸವರಾಜ ಹೊರಟ್ಟಿ (Basavaraj Horatti)

ಅಮಿತ್ ಶಾ ಆಯ್ತು, ಈಗ ನಡ್ಡಾ ಭೇಟಿಗಾಗಿ ಕಾಯುತ್ತಿರುವ ರಾಜ್ಯ ಬಿಜೆಪಿ ನಾಯಕರು!

ಕಾಂಗ್ರೆಸ್ ವಿಧಾನಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಮಾಜಿ ಕಾಂಗ್ರೆಸ್‌ ನಾಯಕ ಸಿ.ಎಂ.ಇಬ್ರಾಹಿಂ ಅವರು ರಂಜಾನ್‌ (Ramdan)ಹಬ್ಬದ ಬಳಿಕ ಜೆಡಿಎಸ್‌ಗೆ (JDS) ಅಧಿಕೃತ ಸೇರ್ಪಡೆಯಾಗಲಿದ್ದಾರೆ. ಬಹುತೇಕ ಇಬ್ರಾಹಿಂ ಅವರಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ನಿಚ್ಚಳವಾಗಿದೆ. ಅದಾಗದಿದ್ದರೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎನ್ನಲಾಗಿದೆ. 

ಸುದೀರ್ಘ 42 ವರ್ಷಗಳಿಂದ ಮೇಲ್ಮನೆ ಸದಸ್ಯರಾಗಿರುವ ಬಸವರಾಜ ಹೊರಟ್ಟಿಅವರು ಬಿಜೆಪಿಗೆ ಸೇರುತ್ತಾರೆಂಬ ಬಗ್ಗೆ ಕಳೆದೊಂದು ವರ್ಷದಿಂದ ವದಂತಿ ಇತ್ತು. ಆದರೆ ಈ ಬಗ್ಗೆ ಅವರು ಈವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇದೀಗ ಅವರು ಬಿಜೆಪಿ ಕಡೆಗೆ ಮುಖಮಾಡಿರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.