ನೆರೆ ಪರಿಹಾರದ ಬಗ್ಗೆ ಸಿಎಂ ಅವಲೋಕನ ನಡೆಸಿದ್ದಾರೆ. 10 ಕ್ಕೂ ಹೆಚ್ಚು ನೆರೆಪೀಡಿತ ಜಿಲ್ಲೆಗಳ ಡಿಸಿ, ಎಸ್‌ಪಿ, ಜಿಪಂ ಸಿಇಒ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಸಮಾಲೋಚನೆ ನಡೆಸಿದ್ದಾರೆ.
ಬೆಂಗಳೂರು (ಅ. 16): ನೆರೆ ಪರಿಹಾರದ ಬಗ್ಗೆ ಸಿಎಂ ಅವಲೋಕನ ನಡೆಸಿದ್ದಾರೆ. 10 ಕ್ಕೂ ಹೆಚ್ಚು ನೆರೆಪೀಡಿತ ಜಿಲ್ಲೆಗಳ ಡಿಸಿ, ಎಸ್‌ಪಿ, ಜಿಪಂ ಸಿಇಒ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಸಮಾಲೋಚನೆ ನಡೆಸಿದ್ದಾರೆ.
ಕಲಬುರಗಿ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ, ಧಾರವಾಡ ಸೇರಿ ಪ್ರವಾಹ ಪೀಡಿತ ಜಿಲ್ಲೆಗಳ ಡಿಸಿಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಯಾವ್ಯಾವ ಭಾಗಗಳಲ್ಲಿ ಎಷ್ಟೆಷ್ಟು ನಷ್ಟ ಆಗಿದೆ? ರೈತರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ? ರಕ್ಷಣಾ ಕಾರ್ಯಾಚರಣೆ ಯಾವ ಹಂತದಲ್ಲಿ ಸಾಗುತ್ತಿದೆ? ಇನ್ನೂ ಏನೆಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ? ಎಂದು ಸಿಎಂ ಅವಲೋಕನ ನಡೆಸಿದ್ದಾರೆ.