Jan 24, 2021, 12:25 PM IST
ಬೆಂಗಳೂರು (ಜ. 24): ಬ್ರೆಜಿಲ್ ಗೆ ಭಾರತ ಕೊರೊನಾ ಲಸಿಕೆ ಕೊಟ್ಟಿದ್ದಕ್ಕೆ, ಅಲ್ಲಿನ ಅಧ್ಯಕ್ಷ ಜೈರ್ ಬೋಲ್ಸೋನಾರೋ ಹರ್ಷ ವ್ಯಕ್ತಪಡಿಸಿದ್ದಾರೆ. ಆಂಜನೇಯ ಸಂಜೀವಿನಿ ಪರ್ವತದ ಮೇಲೆ ಲಸಿಕೆ ಹೊತ್ತೊಯ್ಯುವಂತಹ ಚಿತ್ರವನ್ನು ಟ್ವೀಟ್ ಮಾಡಿ ಪ್ರಧಾನಿ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಆಂಜನೇಯ ಗುಲಾಮಗಿರಿಯ ಸಂಕೇತ ಎಂದು ವಿಚಾರವಾದಿಗಳು ಅಪಸ್ವರ ತೆಗೆದಿದ್ದರು. ಈ ಆರೋಪಕ್ಕೆ ಕಟೀಲ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ನಲ್ಲಿ ದಲಿತ ಎಡಗೈ, ಬಲಗೈ ಪಾಲಿಟಿಕ್ಸ್; ಸಿದ್ದರಾಮಯ್ಯಗೆ ನಾಯಕರಿಂದ ದೂರು
ಗ್ರಾಪಂ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಕಂಡಿದೆ. 45 ಸಾವಿರ ಜನ ಕಾರ್ಯಕರ್ತರು ಜನಪ್ರತಿನಿಧಿಗಳಾಗಿದ್ದಾರೆ. ಬಿಜೆಪಿಯವರೇ ಹೆಚ್ಚು ಮಂದಿ ಅಧ್ಯಕ್ಷರಾಗುತ್ತಾರೆ ಎಂಬ ವಿಶ್ವಾಸವಿದೆ. ಮುಂದಿನ ತಾ,ಪಂ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳ ತಯಾರಿ ಕೂಡಾ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.