ಹುಷಾರ್! ಬ್ರಾಹ್ಮಣರ ಬಗ್ಗೆ ಹೇಳಿಕೆಗೆ ಸಿದ್ದರಾಮಯ್ಯಗೆ ಬ್ರಾಹ್ಮಣರಿಂದ ಎಚ್ಚರಿಕೆ

Jun 28, 2022, 6:58 PM IST

ರಾಮನಗರ (ಜೂ. 28):  ಇತ್ತೀಚಿಗೆ ಬ್ರಾಹ್ಮಣ ಸಮುದಾಯ ಮೇಲೆ ಖಾಸಗಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ (Siddaramaiah) ವಿರುದ್ಧ ಬ್ರಾಹ್ಮಣರು ಕೆಂಡಾಮಂಡಲರಾಗಿದ್ದಾರೆ. ಅಡುಗೆ ಮಾಡಲು ಬಂದ್ರೆ ನಮಸ್ಕಾರ ಬುದ್ದಿ ಅಂತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಬ್ರಾಹ್ಮಣರು 'ಹೌದು ನಾವು ಸಂಸ್ಕಾರ ಸಮುದಾಯ ಆದ್ದರಿಂದ ನಮಸ್ಕರಿಸುತ್ತಾರೆ, ನಿಮಗೆ ಸಂಸ್ಕಾರ ಇಲ್ಲ, ನಮ್ಮ ರಕ್ತದಲ್ಲೇ ಸಂಸ್ಕಾರ ಬಂದಿದೆ, ನಿಮ್ಮಿಂದ ನಾವು ಸಂಸ್ಕಾರ ಕಲಿಯಬೇಕಿಲ್ಲ, ಇಂದಿರಾಗಾಂಧಿ ಕಾಲದಲ್ಲಿ ಯಾರು ಜಾಗ ತಗೊಂಡು, ಬ್ರಾಹ್ಮಣರನ್ನ ಬೀದಿಪಾಲು ಮಾಡಿದ್ರು? ನಿಮ್ಮ ರಾಜಕೀಯವನ್ನು ರಾಜಕೀಯಕ್ಕೆ ಇಟ್ಟುಕೊಳ್ಳಿ! ಹುಷಾರ್ ಎಂದು ಬ್ರಾಹ್ಮಣರು ಆಕ್ರೋಶ ಹೊರಹಾಕಿದ್ದಾರೆ

'ಸಿಎಂ 44 ಜಾತಿಗಳಾಗಿ ವಿಂಗಡಿಸಿ ಬ್ರಾಹ್ಮಣರು ಅಂತ ನಮೋದಿಸದೇ ದೌರ್ಜನ್ಯ ಎಸಗಿದರು', ನಿಮ್ಮ ರಾಜಕೀಯವನ್ನು ರಾಜಕೀಯಕ್ಕೆ ಇಟ್ಟುಕೊಳ್ಳಿ! ಹುಷಾರ್ ಸಿದ್ದರಾಮಯ್ಯಗೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ನೋಡಿ: ಮೊದಲು ಬಿಜೆಪಿ ದಲಿತ ಸಿಎಂ ಘೋಷಿಸಲಿ: ಸಿದ್ದು