ಕೆಲವು ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಮೇ 3ಕ್ಕೆ ಬೆಂಗಳೂರಿಗೆ (Bengaluru) ಆಗಮಿಸುತ್ತಿದ್ದು, ಅಂದು ಪಕ್ಷದ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮವೂ ನಿಗದಿಯಾಗಿರುವುದು ಕುತೂಹಲ ಮೂಡಿಸಿದೆ.
ಬೆಂಗಳೂರು (ಮೇ. 01): ಕೆಲವು ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಮೇ 3ಕ್ಕೆ ಬೆಂಗಳೂರಿಗೆ (Bengaluru) ಆಗಮಿಸುತ್ತಿದ್ದು, ಅಂದು ಪಕ್ಷದ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮವೂ ನಿಗದಿಯಾಗಿರುವುದು ಕುತೂಹಲ ಮೂಡಿಸಿದೆ.
ಇಂದು ಮಲ್ಲೇಶ್ವರಂ (Malleshwaram) ಬಿಜೆಪಿ ಕಚೇರಿಯಲ್ಲಿ ಬಿಎಲ್ ಸಂತೋಷ್ (BL Santosh) ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಅಮಿತ್ ಶಾ ಭೇಟ ವೇಳೆ ಯಾವ ವಿಚಾರ ಚರ್ಚಿಸಬೇಕು.? ಕೋರ್ ಕಮಿಟಿ ಸಭೆ ಮಾಡಬೇಕಾ.? ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ.