Aug 15, 2021, 4:59 PM IST
ಬೆಂಗಳೂರು (ಆ. 15) : ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ. ಅವರು ಹೇಳಿದ್ದು ಯಾವಾಗಲೂ ಉಲ್ಟಾ ಆಗುತ್ತೆ' ಎಂದು ಸಿ.ಟಿ ರವಿ ಟಾಂಗ್ ಕೊಟ್ಟಿದ್ದಾರೆ.
'ಅಪ್ಪನಾಣೆ ಮೋದಿ ಪ್ರಧಾನಿ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಮೋದಿ 2 ಬಾರಿ ಪ್ರಧಾನಿ ಆಗಿದ್ದಾರೆ. ನಾನು ಮತ್ತೆ ಅಧಿಕಾರಕ್ಕೆ ಬಂದೇ ಬರ್ತೀನಿ ಅಂದಿದ್ರು. ಬಂದ್ರಾ.? ಬಿಜೆಪಿ ಅಧಿಕಾರಲ್ಲ ಬರಲ್ಲ ಅಂದರೆ ಬರುತ್ತೆ ಅಂತಾನೆ ಅರ್ಥ. ಕೆಲವರ ಬಾಯಲ್ಲಿ ಮಚ್ಚೆ ಇರುತ್ತೆ. ಅವರು ಹೇಳಿದ ಹಾಗೆ ಆಗುತ್ತೆ ಅಂತಾರೆ. ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ. ಹಾಗಾಗಿ ಹೇಳಿದ್ದೆಲ್ಲವೂ ಉಲ್ಟಾ ಆಗುತ್ತೆ' ಎಂದು ಸಿ. ಟಿ ರವಿ ವ್ಯಂಗ್ಯವಾಡಿದ್ದಾರೆ.