ಹಿಂದಿ ಭಾಷೆ ವಿಚಾರದಲ್ಲಿ ಮಾತನಾಡಿರುವ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ಕೇಂದ್ರ ಸರ್ಕಾರ ಯಾವುದರ ಪರವಾಗಿ ಇರುತ್ತದೆಯೂ ನಾವು ಅದರ ಪರ ಇರುತ್ತೇವೆ ಎಂದು ಹೇಳುವ ಮೂಲಕ ದ್ವಂದ್ವ ಹೇಳಿಕೆ ನೀಡಿದ್ದಾರೆ.
ವಿಜಯಪುರ (ಏ.28): ನಟ ಸುದೀಪ್ (Sudeep), ಅಜಯ್ ದೇವಗನ್ (Ajay Devgn) ಹಿಂದಿ ಭಾಷೆ ವಾರ್ ವಿಚಾರ ವಿಜಯಪುರದಲ್ಲಿ (Vijayapura) ಸಂಸದ ರಮೇಶ ಜಿಗಜಿಣಗಿ (Ramesh Jigajinagi ) ಹೇಳಿಕೆ ನೀಡಿದ್ದು, ನಾನು ಇಬ್ಬರು ಪರವಾಗಿ ಇಲ್ಲ, ಸರ್ಕಾರದ ನೀತಿ ಪರವಾಗಿ ಇದೇನಿ ಎಂದ ಹೇಳಿದ್ದಾರೆ.
ಭಾಷೆಯ ವಿಚಾರದಲ್ಲಿ ಬಿಜೆಪಿ ಸಂಸದರಲ್ಲಿ ಸ್ಪಷ್ಟತೆ ಇಲ್ಲ ಎನ್ನುವುದು ಜಿಗಜಿಣಗಿ ಮಾತಿನಿಂದ ಅರ್ಥವಾಗುತ್ತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಯಾರ ಪರವಾಗಿ ಇರುತ್ತದೋ ಆ ಕಡೆ ನಾವು ಇರಲೇಬೇಕಾಗುತ್ತದೆ ಎಂದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಸುದೀಪ್ ಪರ ಬೊಮ್ಮಯಿ ಬ್ಯಾಟಿಂಗ್..!
ಕೇಂದ್ರ ಸರ್ಕಾರದ ನಿರ್ಣಯಕ್ಕೆ ನಾನು ಬದ್ಧ. ಕೇಂದ್ರ ಹಿಂದಿ ಭಾಷೆ ಪರವಾಗಿದ್ದರೆ ನಾನು ಆ ಕಡೆ, ಅದೇ ಬೇರೆ ಭಾಷೆ ಪರವಾಗಿದ್ದರೆ ಆ ಕಡೆ ಇರುತ್ತೇನೆ. ಭಾಷೆ ವಿಚಾರವಾಗಿ ತಮಿಳುನಾಡು, ಮಹಾರಾಷ್ಟ್ರ ಸೇರಿ ಎಲ್ಲ ರಾಜ್ಯಗಳಲ್ಲಿ ಭಿನ್ನರಾಗವಿದೆ ಎಂದರು. ತಾವು ಕನ್ನಡದ ಪರವಾಗಿ ಇರುತ್ತೇನೆ ಎನ್ನುವ ಮಾತು ಅವರಿಂದ ಬಂದಿಲ್ಲ.