ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣ ಭಾರಿ ಸದ್ದು ಮಾಡುತ್ತಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಸತತ ಸುದ್ದಿಗೋಷ್ಠಿ ಮೂಲಕ ಗಂಭೀರ ಆರೋಪ ಮಾಡುತ್ತಿದೆ.
ಬೆಂಗಳೂರು (ನ. 12): ರಾಜ್ಯದಲ್ಲಿ ಬಿಟ್‌ಕಾಯಿನ್ ಹಗರಣ (BitCoin Scam) ಭಾರಿ ಸದ್ದು ಮಾಡುತ್ತಿದೆ. ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಸತತ ಸುದ್ದಿಗೋಷ್ಠಿ ಮೂಲಕ ಗಂಭೀರ ಆರೋಪ ಮಾಡುತ್ತಿದೆ. ಕೇವಲ ಆರೋಪ ಮಾಡುವುದಲ್ಲ, ಸಾಕ್ಷ್ಯ ಕೊಡಿ ಸ್ವಾಮಿ ಎಂದು ಬಿಜೆಪಿ ಕೇಳುತ್ತಿದೆ. ಇದರ ನಡುವೆ ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಆಡಿಯೋ ಲೀಕ್ ಆಗಿದೆ. IPS ಅಧಿಕಾರಿ, ತನಿಖಾ ತಂಡದ ಕೆಳ ಅಧಿಕಾರಿಗಳ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿರುವ ಈ ಫೋನ್ ಕಾಲ್, ಕೆಲ ಮಾಹಿತಿಯನ್ನು ಬಹಿರಂಗ ಪಡಿಸಿದೆ.
ಬಿಟ್ ಕಾಯಿನ್ ಪ್ರಕರಣದ ಕುರಿತು ಸಿಸಿಬಿ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಪೊಲೀಸರ ತನಿಖೆ ಮೇಲೆ ವ್ಯಕ್ತವಾಗಿರುವ ಶಂಕೆಗಳ ನಿವಾರಣೆಗೆ ಸ್ವತಂತ್ರ ವಿಚಾರಣಾ ಸಮಿತಿ ರಚಿಸಿ ವರದಿ ಪಡೆಯಲು ಸರ್ಕಾರ ಚಿಂತನೆ ನಡೆಸಿದೆ. ಹ್ಯಾಕರ್ ಶ್ರೀಕಿ ಬಗ್ಗೆ ಪ್ರಿಯಾಂಕ ಖರ್ಗೆ (Priyank Kharge) ಮಾಹಿತಿ ಬಹಿರಂಗಪಡಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಇಡೀ ಪ್ರಕರಣದ ಬಗ್ಗೆ ಸವಿವರ ನೀಡಿದ್ದಾರೆ.