Jul 2, 2022, 1:13 PM IST
ಇವತ್ತಿನ ಬಿಗ್ 3 ಹೀರೋ ಜೀವನ್. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕುರುಬರ ಹಳ್ಳಿ ನಿವಾಸಿ. ಈತನ ಸಾಧನೆ ಬಗ್ಗೆ ಕೇಳಿದ್ರೆ ಹೆಮ್ಮೆ ಅನಿಸದೇ ಇರದು. ಪಿಯುಸಿ ಫೇಲಾದ ಜೀವನ್, ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ತಯಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಕೊರೊನಾ ಸಮಯದಲ್ಲಿ ತರಗತಿ ಸರಿಯಾಗಿ ನಡೆಯುತ್ತಿರಲಿಲ್ಲವಾದ್ದರಿಂದ ಜೀವನ್ ಮೊಬೈಲ್‌ನಲ್ಲಿ ಮುಳುಗಿರುತ್ತಿದ್ದರು. ಆಗ ವಿದ್ಯುತ್ ಚಾಲಿತ ವಾಹನ ತಯಾರಿಸುವ ಬಗ್ಗೆ ನೋಡಿ ತಾನೂ ಹಾಗೆ ಮಾಡಲು ಮುಂದಾಗುತ್ತಾನೆ. ೬೦ ಸಾವಿರ ವೆಚ್ಚದಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಸಿ, ಗಮನ ಸೆಳೆದಿದ್ದಾನೆ. ಈ ಕಾರನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಚಲಾಯಿಸಿದ್ದಾನೆ. ಮಗನ ಸಾಧನೆ ನೋಡಿ ಪೋಷಕರು ಸಂತಸಪಟ್ಟಿದ್ದಾರೆ. ಅಗತ್ಯವಾದ ನೆರವು ಸಿಕ್ಕರೆ ಇನ್ನಷ್ಟು ಸಾಧನೆ ಮಾಡುವ ಇರಾದೆ ವ್ಯಕ್ತಪಡಿಸಿದ್ದಾನೆ ಜೀವನ್.