ತೆರೆ ಮರೆಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ, ಸಮಾಜದ ಒಳಿತಾಗಿ ದುಡಿಯುತ್ತಿರುವ ಮಂದಿ ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಕೆಲವೊಮ್ಮೆ ಅವರನ್ನು ಗುರುತಿಸಲಾಗುತ್ತದೆ, ಕೆಲವೊಮ್ಮೆ ಅವರು ಬೆಳಕಿಗೆ ಬರದೇ ಇರಬಹುದು. ಅಂತವನ್ನು ಗುರುತಿಸುವ ಕೆಲಸ ಮಾಡುತ್ತಿದೆ ಬಿಗ್ 3. ಇಂದಿನ ನಮ್ಮ ಹೀರೋ ಕೋಲಾರದ ಡಾ.ಜಯಮ್ಮ
ಬೆಂಗಳೂರು (ಜು. 09): ತೆರೆ ಮರೆಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ, ಸಮಾಜದ ಒಳಿತಾಗಿ ದುಡಿಯುತ್ತಿರುವ ಮಂದಿ ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಕೆಲವೊಮ್ಮೆ ಅವರನ್ನು ಗುರುತಿಸಲಾಗುತ್ತದೆ, ಕೆಲವೊಮ್ಮೆ ಅವರು ಬೆಳಕಿಗೆ ಬರದೇ ಇರಬಹುದು. ಅಂತವನ್ನು ಗುರುತಿಸುವ ಕೆಲಸ ಮಾಡುತ್ತಿದೆ ಬಿಗ್ 3. ಇಂದಿನ ನಮ್ಮ ಹೀರೋ ಕೋಲಾರದ ಡಾ.ಜಯಮ್ಮ.
ಕೋಲಾರದ ಘಟ್ಟಹಳ್ಳಿಯಲ್ಲಿರುವ ಆಂಜನಪ್ಪ ಆಶ್ರಮವನ್ನು ನೋಡಿಕೊಳ್ಳುತ್ತಿದ್ದಾರೆ ಡಾ. ಜಯಮ್ಮ. ಇವರು ಎಂಬಿಬಿಎಸ್ ಹಾಗೂ ಎಂಡಿ ಮುಗಿಸಿ ಕೆಲವರ್ಷಗಳ ಕಾಲ ಬೆಂಗಳೂರಿನ ವಾಣಿವಿಲಾಸ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ಕಾರಣಾಂತರವಾಗಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಖಾಸಗಿಯಾಗಿ ಕೆಲಸ ಮಾಡುತ್ತಾರೆ. ಅಲ್ಲಿಯೂ ಕೆಲಸ ಬಿಟ್ಟು ಆಂಜನಪ್ಪ ಆಶ್ರಮದ ಮೂಲಕ ಉಚಿತವಾಗಿ ಬಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಜೊತೆಗೆ 1-7 ತರಗತಿ ಮಕ್ಕಳಿಗೆ ಉಚಿತ ಟ್ಯೂಷನ್ ನೀಡುತ್ತಿದ್ದಾರೆ. ಈ ತಾಯಿ, ಕೋಲಾರ ಭಾಗದ ಜನರ ಪಾಲಿಗೆ ದೇವತೆಯಾಗಿದ್ದಾರೆ. ಈ ತಾಯಿ ಸಮಾಜ ಸೇವೆಗೆ ನಮ್ಮದೊಂದು ಸಲಾಂ..!