ದಾವಣಗೆರೆ (Davanagere) ಬಲ್ಲೂರು ಗ್ರಾಮದಲ್ಲಿ ಓವರ್ ಹೆಡ್ (Over tank) ಶಿಥಿಲಾವಸ್ಥೆಯಲ್ಲಿದೆ. ಈ ನೀರಿನ ಟ್ಯಾಂಕ್ ಶಾಲಾ ಕಟ್ಟಡಕ್ಕೆ ಹೊಂದಿಕೊಂಡಿದ್ದು, ಮಕ್ಕಳು ಜೀವಭಯದಲ್ಲಿ ಪಾಠ ಕೇಳುವಂತಾಗಿದೆ. ಪೋಷಕರು ಕೂಡಾ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ.
ದಾವಣಗೆರೆ (ಜು. 08): ಇಲ್ಲಿನ ಬಲ್ಲೂರು ಗ್ರಾಮದಲ್ಲಿ ಓವರ್ ಹೆಡ್ (Over Head) ಶಿಥಿಲಾವಸ್ಥೆಯಲ್ಲಿದೆ. ಈ ನೀರಿನ ಟ್ಯಾಂಕ್ ಶಾಲಾ ಕಟ್ಟಡಕ್ಕೆ ಹೊಂದಿಕೊಂಡಿದ್ದು, ಮಕ್ಕಳು ಜೀವಭಯದಲ್ಲಿ ಪಾಠ ಕೇಳುವಂತಾಗಿದೆ. ಪೋಷಕರು ಕೂಡಾ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ.
ನೀರಿನ ಟ್ಯಾಂಕನ್ನು ಕೆಡವಿ ಹೊಸ ಟ್ಯಾಂಕ್ ಕಟ್ಟುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೆ, ಅವರು ನಿರ್ಲಕ್ಷ್ಯ ವಹಿಸಿದ್ದಾರೆ. ಸುವರ್ಣ ನ್ಯೂಸ್ ಕ್ಯಾಮೆರಾ ಕಾಣುತ್ತಿದ್ದಂತೆ, ಹೊಸ ನೀರಿನ ಟ್ಯಾಂಕ್‌ಗೆ ನೀರಿನ ಸಂಪರ್ಕ ಕೊಟ್ಟು, ಈ ಟ್ಯಾಂಕ್‌ಗೆ ನೀರು ಬಿಡುವುದನ್ನು ನಿಲ್ಲಿಸಿದ್ದಾರೆ. ಆದರೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಮಾತ್ರ ಹಾಗೆ ಇದೆ. ಇದನ್ನು ಸರಿಪಡಿಸದೇ ಹೋದರೆ ಬಿಗ್3 ಚಳಿ ಬಿಡಿಸುವುದು ಗ್ಯಾರಂಟಿ!