ಗಣಿನಾಡಿನಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರ ಮಾತ್ರ ಉದ್ಘಾಟನೆಯಾಗದೇ ಪಾಳು ಬಿದ್ದಿದೆ. ಎಲ್ಲಾ ಸಿದ್ದವಾಗಿದ್ದು 2 ವರ್ಷ ಕಳೆಯುತ್ತಾ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಾಯಕಲ್ಪ ನೀಡುತ್ತಿಲ್ಲ.
ಬಳ್ಳಾರಿ (ಆ.04): ಗಣಿನಾಡಿನಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರ ಮಾತ್ರ ಉದ್ಘಾಟನೆಯಾಗದೇ ಪಾಳು ಬಿದ್ದಿದೆ. ಎಲ್ಲಾ ಸಿದ್ದವಾಗಿದ್ದು 2 ವರ್ಷ ಕಳೆಯುತ್ತಾ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಾಯಕಲ್ಪ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ಸಮಯ ಇದ್ದರೂ, ಈ ಪ್ರವಾಸಿ ಮಂದಿರ ಉದ್ಘಾಟನೆಗೆ ಟೈಂ ಇಲ್ವಂತೆ. ಈ ಅತಿಥಿ ಗೃಹ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದೆ. ಆದಷ್ಟು ಬೇಗ ಉದ್ಘಾಟನೆ ಮಾಡಿ ಎಂದು ಸ್ಥಳೀಯರು, ಬಿಗ್ 3 ಆಗ್ರಹ.