Santosh Naik | Published: May 15, 2024, 1:45 PM IST
ಬೀದರ್ (ಮೇ.15): ಇದು ಚುನಾವಣಾ ಟೈಮ್, ನಾಯಕರು ಅಧಿಕಾರದ ಸೀಟ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಸಾಮಾನ್ಯ ಜನರ ಸ್ಥಿತಿ ನಾಯಿಪಾಡಾಗಿದೆ. ಬಸ್‌ನಲ್ಲಿ ಸೀಟ್ ವಿಚಾರವಾಗಿ ಬೀದರ್‌ನಲ್ಲಿ ಇಬ್ಬರು ಮಹಿಳೆಯರು ಜಡೆಜಗಳ ಮಾಡಿದ್ದಲ್ಲದೆ, ಬಟ್ಟೆ ಹಿಡಿದುಕೊಂಡು ಎಳೆದಾಟ ಮಾಡಿದ್ದಾರೆ.
ಇವರ ಹೊಡೆದಾಟ ಎಷ್ಟು ವಿಕೋಪಕ್ಕೆ ಹೋಗಿತ್ತೆಂದರೆ, ಒಂದು ಹಂತದಲ್ಲಿ ಇಬ್ಬರೂ ಮಹಿಳೆಯರು ತಮ್ಮ ಕಾಲಲ್ಲಿದ್ದ ಚಪ್ಪಲಿ ತೆಗೆದುಕೊಂಡು ಹೊಡೆದಾಡಲು ಆರಂಭಿಸಿದ್ದಾರೆ. ಬೀದರ್‌ನಿಂದ ಕಲಬುರಗಿಗೆ ಹೋಗುವ ಬಸ್‌ನಲ್ಲಿ ಘಟನೆ ವಿಡಿಯೋ ವೈರಲ್ ಆಗಿದೆ.
ಶಕ್ತಿ ಯೋಜನೆ: 200 ಕೋಟಿ ಮಹಿಳೆಯರಿಂದ ರಾಜ್ಯದಲ್ಲಿ ಫ್ರೀ ಬಸ್ ಯಾನ!
ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಚಪ್ಪಲಿಯಿಂದ ಮಹಿಳೆಯರು ಹೊಡೆದಾಟ ಮಾಡಿಕೊಂಡಿದ್ದಾರೆ. ಸಹ ಪ್ರಯಾಣಿಕರು ಎಷ್ಟೇ ಹೇಳಿದರೂ ಮಹಿಳೆಯರು ಜಗಳ ನಿಲ್ಲಿಸಿರಲಿಲ್ಲ. ಇವರ ಜಗಳವನ್ನು ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ.