ರಾಜ್ಯದ ಎರಡು ಕಡೆ ರೈಲು ಸೇವೆ ಆರಂಭ| ಬೆಂಗಳೂರಿನಿಂದ ಮೈಸೂರು ಹಾಗೂ ಬೆಳಗಾವಿ ಈ ನಗರಗಳಿಗೆ ರೈಲು ಸೇವೆ| ಮಾರ್ಗ ಮಧ್ಯೆ ಸೀಮಿತ ಸ್ಟಾಪ್‌ಗಳಲ್ಲಿ ರೈಲು ನಿಲುಗಡೆ|
ಬೆಂಗಳೂರು(ಮೇ.22): ಇಂದಿನಿಂದ(ಶುಕ್ರವಾರ) ರಾಜ್ಯದ ಎರಡು ಕಡೆ ರೈಲು ಸೇವೆ ಆರಂಭವಾಗುತ್ತಿದೆ. ಹೌದು, ಬೆಂಗಳೂರಿನಿಂದ ಮೈಸೂರು ಹಾಗೂ ಬೆಳಗಾವಿ ಈ ನಗರಗಳಿಗೆ ರೈಲು ಸೇವೆ ಆರಂಭವಾಗಲಿದೆ. ಇದರಿಂದ ರೈಲ್ವೆ ಪ್ರಯಾಣಿಕರು ಸಂತಸದ ಸುದ್ದಿ ಇದಾಗಿದೆ.
ರಾಜ್ಯದಲ್ಲಿ 144 ಕೊರೋನಾ ಪ್ರಕರಣಗಳ ಹಿನ್ನಲೆ ನಿಗೂಢ..!
ಬೆಳಿಗ್ಗೆ 9. 20ಕ್ಕೆ ಬೆಂಗಳೂರಿನಿಂದ ಮೈಸೂರಿನತ್ತ ರೈಲು ಹೊರಡುತ್ತದೆ. ವಾರದಲ್ಲಿ ಆರು ದಿನ ರೈಲು ಸೇವೆ ಇರಲಿದೆ. ಮಾರ್ಗ ಮಧ್ಯೆ ಸೀಮಿತ ಸ್ಟಾಪ್‌ಗಳಲ್ಲಿ ನಿಲುಗಡೆ ಮಾಡಲಾಗುತ್ತದೆ. ಇನ್ನು ಬೆಳಿಗ್ಗೆ ಬೆಂಗಳೂರಿನಿಂದ 8 ಗಂಟೆಗೆ ಬೆಳಗಾವಿಗೆ ಮತ್ತೊಂದು ರೈಲು ಹೊರಡಲಿದೆ.