ಬೆಂಗ್ಳೂರು ಗಲಭೆ: ಫೇಸ್‌ಬುಕ್‌ ಲೈವ್‌ ಮಾಡಿದ್ದ ಇಬ್ಬರು ಸಿಸಿಬಿ ವಶಕ್ಕೆ

Aug 18, 2020, 3:09 PM IST

ಬೆಂಗಳೂರು (ಆ. 18): ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಪ್ರಚೋದನೆ ನೀಡಿದ್ದ ಇಬ್ಬರನ್ನು ಬಂಧಿಸಲಾಗಿದೆ. ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಲೈವ್ ಮಾಡಿ ಗಲಭೆಯಲ್ಲಿ ಹೆಚ್ಚು ಜನ ಪಾಲ್ಗೊಳ್ಳಿ ಎಂದು ಜಾಕೀರ್ ಹಾಗೂ ಸೈಯದ್ ಕರೆ ನೀಡಿದ್ದರು. ಅಷ್ಟು ದೊಡ್ಡ ಮಟ್ಟಕ್ಕೆ ಘಟನೆ ನಡೆಯಲು ಇವರಿಬ್ಬರೂ ಕೂಡಾ ಪ್ರಚೋದನೆ ನೀಡಿದ್ದಾರೆ.  ಇವರು ಹಾಕಿದ ಪೋಸ್ಟ್ ನೋಡಿದ ಕೂಡಲೇ ಜನ ಕೂಡಾ ಪ್ರಚೋದನೆಗೊಳಗಾಗಿದ್ದಾರೆ.  ಕೂಡಲೇ ಠಾಣೆ ಬಳಿ ಜಮಾಯಿಸಿದ್ದಾರೆ. ಘಟನೆ ನಡೆದ ಬಳಿಕ ನಾಪತ್ತೆಯಾಗಿದ್ದರು. ಸಿಸಿಬಿ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಬೆಂಗ್ಳೂರು ಗಲಭೆ: ಮಾಜಿ ಮೇಯರ್ ಸಂಪತ್‌ ರಾಜ್ ಪಿಎ ಸಿಸಿಬಿ ವಶಕ್ಕೆ