ದರ್ಶನ್‌​ SLP ಖೆಡ್ಡಾ, ಶಿಕ್ಷೆ ಕೊಡಿಸೋಕೆ ಖಾಕಿ ಸಿದ್ಧ! ಬೇಲ್ ರದ್ದತಿಗೆ 5 ಕಾರಣಗಳ ಪಟ್ಟಿ ರೆಡಿ

ದರ್ಶನ್‌​ SLP ಖೆಡ್ಡಾ, ಶಿಕ್ಷೆ ಕೊಡಿಸೋಕೆ ಖಾಕಿ ಸಿದ್ಧ! ಬೇಲ್ ರದ್ದತಿಗೆ 5 ಕಾರಣಗಳ ಪಟ್ಟಿ ರೆಡಿ

Published : Jan 09, 2025, 06:55 PM IST

ದರ್ಶನ್, ಪವಿತ್ರಾ ಗೌಡ ಸೇರಿ 7 ಜನ ಆರೋಪಿಗಳ ಬೇಲ್ ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ದರ್ಶನ್ ವಿರುದ್ಧ ಎಸ್‌ಎಲ್‌ಪಿ ಅರ್ಜಿ ಸಲ್ಲಿಕೆಯಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಬೇಲ್ ರದ್ದು ಮಾಡುವಂತೆ ಪ್ರಾಸಿಕ್ಯೂಶನ್ ವಾದ ಮಂಡಿಸಲಿದೆ.

ದರ್ಶನ್‌ಗೆ ಹೈಕೋರ್ಟ್ ಕೊಟ್ಟಿರೋ ಬೇಲ್ ವಿರುದ್ದ ರಾಜ್ಯಸರ್ಕಾರ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದೆ. ದರ್ಶನ್ , ಪವಿತ್ರಾ ಗೌಡ ಸೇರಿದಂತೆ 7 ಜನ ಆರೋಪಿಗಳ ಬೇಲ್ ರದ್ದು ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಅದ್ರಲ್ಲೂ ದರ್ಶನ್ ವಿರುದ್ದ SLP ಅರ್ಜಿ ಸಲ್ಲಿಕೆಯಾಗುದ್ದು ಇದುವೇ ದಾಸನ ಬೇಲ್​ಗೆ ಕೊಕ್ಕೆ ಹಾಕೋ ಚಾನ್ಸ್ ಇದೆ. ಅಷ್ಟಕ್ಕೂ ಏನಿದು SLP  ಕಂಟಕ?

ಕಳೆದ ಡಿಸೆಂಬರ್ 13ನೇ ತಾರೀಖು ದರ್ಶನ್ , ಪವಿತ್ರಾ ಗೌಡ ಮತ್ತು ರೇಣುಕಾಸ್ವಾಮಿ ಮರ್ಡರ್​​ ಕೇಸ್​ ನ ಒಟ್ಟು ಏಳು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಕೊಟ್ಟಿದೆ. ಆದ್ರೆ ಇದರ ವಿರುದ್ದ ಈಗ ಸುಪ್ರೀಂ ಕೋರ್ಟ್​ನಲ್ಲಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. ಇವರಿಗೆ ನೀಡಿರೋ ಬೇಲ್​ನ ರದ್ದು ಮಾಡಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಕೊಡಿ ಅಂತ ಮನವಿ ಸಲ್ಲಿಸಿದೆ.

ಅದ್ರಲ್ಲೂ ದರ್ಶನ್​ ಬೇಲ್ ನ ತ್ವರಿತವಾಗಿ ರದ್ದು ಮಾಡಬೇಕು ಅಂತ ಪ್ರಾಸಿಕ್ಯೂಶನ್ ವಾದ ಮಂಡಿಸಲಿದೆ. ಇದಕ್ಕಾಗಿ ಎಸ್.ಎಲ್.ಪಿ ಅಂದ್ರೆ ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಕೆ ಆಗಿದೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು , ಅಧಿಕಾರಸ್ಥರಿಗೆ ಬೇಲ್ ಸಿಕ್ರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಚಾನ್ಸ್ ಇರುತ್ತೆ. ಈ ಕೇಸ್​​ನಲ್ಲಿ 262 ಸಾಕ್ಷಿಗಳಿದ್ದು ಇವರ ಮೇಲೆ ದರ್ಶನ್ ಪ್ರಭಾವ ಬೀರೋದು ಖಚಿತ ಅಂತ ವಾದ ಮಂಡನೆ ಮಾಡಲಿದೆ.

ಇನ್ನೂ ದರ್ಶನ್ ಬೆನ್ನು ನೋವಿನ ನೆಪ ಹೇಳಿ ಮಧ್ಯಂತರ ಬೇಲ್ ಪಡೆದುಕೊಂಡು 6 ವಾರ ಆಸ್ಪತ್ರೆಯಲ್ಲಿ ಟೈಂ ಪಾಸ್ ಮಾಡಿದ ವಿಚಾರವನ್ನೂ ಸುಪ್ರಿಂ ಕೋರ್ಟ್ ಎದುರು ಇಡಲಾಗುತ್ತೆ. ಇದು ಕೂಡ ದರ್ಶನ್​ಗೆ ಕಂಟಕ ಆಗೋ ಸಾಧ್ಯತೆ ಇದೆ.

ಸದ್ಯ ಜಾಮೀನು ಸಿಗ್ತಾ ಇದ್ದ ಹಾಗೆ ದರ್ಶನ್ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ಬೀಡುಬಿಟ್ಟಿದ್ದಾರೆ. ವರ್ಷದ ಮೊದಲ ದಿನ ಡೆವಿಲ್​ ಸಿನಿಮಾಗೆ ಒಂದು ಗಂಟೆ ಡಬ್ಬಿಂಗ್ ಮಾಡಿರೋ ದರ್ಶನ್ ಮತ್ತೆ ಸಿನಿಮಾದಲ್ಲಿ ಌಕ್ಟಿವ್ ಆಗೋ ಆಲೋಚನೆಯಲ್ಲಿ ಇದ್ದಾರೆ. ಇದೇ ಸಂಕ್ರಾಂತಿ ಹೊತ್ತಲ್ಲಿ ಬೆನ್ನು ನೋವಿಗೆ ಸರ್ಜರಿ ಮಾಡಿಸಿಕೊಳ್ಳೋದಕ್ಕೂ ಪ್ಲಾನ್ ಮಾಡಿದ್ದಾರೆ.

ಇನ್ನೂ ಪವಿತ್ರಾ ಗೌಡ ಸಂಕ್ರಾಂತಿಗೆ ತನ್ನ ರೆಡ್ ಕಾರ್ಪೆಟ್ ಸ್ಟುಡಿಯೋ ಬೊಟಿಕ್ ರೀ ಓಪನ್ ಮಾಡಿ ಮತ್ತೆ ಹೊಸ ಜೀವನ ಶುರು ಮಾಡೋ ಯೋಜನೆ ಹಾಕಿಕೊಂಡಿದ್ದಾಳೆ. ಆದ್ರೆ ಕಾನೂನಿನ ಕುಣಿಕೆ ಅಷ್ಟು ಬೇಗ ಅಂತ ಇವರನ್ನ ಬಿಡೋ ಸಾಧ್ಯತೆ ಇಲ್ಲ. ಸದ್ಯ ಸುಪ್ರಿಂಗೆ ಸಲ್ಲಿಗೆಯಾಗಿರೋ ಎಸ್.ಎಲ್.ಪಿ ಅರ್ಜಿ ದಾಸ & ಗ್ಯಾಂಗ್​ಗೆ ಮತ್ತೆ ಢವ ಢವ ಶುರುವಾಗುವಂತೆ ಮಾಡಿದೆ.
 

24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!