Jul 15, 2020, 4:32 PM IST
ಬೆಂಗಳೂರು(ಜು.15): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ(ಜು.14)ರ ಸಂಜೆಯಿಂದಲೇ ಒಂದು ವಾರದ ಲಾಕ್‌ಡೌನ್ ಜಾರಿಯಾಗಿದೆ. ಈ ಬಾರಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿರಲಿದೆ ಎಂದು ಸರ್ಕಾರ ಖಚಿತಪಡಿಸಿದ ಬೆನ್ನಲ್ಲೇ ಬೆಂಗಳೂರಿನಿಂದ ಕಾಲ್ಕೀಳುವವರ ಸಂಖ್ಯೆಯೂ ಹೆಚ್ಚಾಗಿದೆ.
ಲಾಕ್‌ಡೌನ್ ಘೋಷಣೆ ಬೆನ್ನಲ್ಲೇ ಬೆಂಗಳೂರಿನಲ್ಲಿ ವಾಸವಿದ್ದ ಬೇರೆ ಜಿಲ್ಲೆಗಳ ಜನರು ಕಾರು, ಬೈಕ್‌ಗಳ ಮೂಲಕ ತಮ್ಮ ತಮ್ಮ ಊರು ಸೇರಿಕೊಂಡಿದ್ದಾರೆ. ಇನ್ನು ಕೆಲವರಂತೂ ಗಂಟು-ಮೂಟೆ ಕಟ್ಟಿಕೊಂಡು ಬೆಂಗಳೂರಿಗೆ ಗುಡ್‌ಬೈ ಹೇಳಿದ್ದಾರೆ
ರಸ್ತೆಗಿಳಿಯಬೇಡಿ, 12 ಗಂಟೆ ನಂತರ ಹೊರ ಬಂದ್ರೆ ಲಾಠಿ ಏಟು ಪಕ್ಕಾ; ಗೃಹ ಸಚಿವ
ಇನ್ನು ಕೆಂಪೇಗೌಡ ವಿಮಾನದ ಬಳಿಯೂ ಜನವೋ ಜನ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ನೆಲೆಸಿದ್ದ ಅನ್ಯರಾಜ್ಯಗಳ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ತಮ್ಮ ತಮ್ಮ ತವರಿಗೆ ಮರಳಲು ಮುಂದಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ