- ಮಲ್ಲೇಶ್ವರಂನಿಂದ ಜಯನಗರಕ್ಕೆ ಹೋಗ್ತಿದ್ದ ವ್ಯಕ್ತಿ, ಬೆನ್ಜ್ ಕಾರು ಸೀಜ್
- ಮಲ್ಲೇಶ್ವರಂ ಅಸ್ಪತ್ರೆಗೆ ಹೋಗಿದ್ದೆ ಎಂದು ಕಳ್ಳಾಟ
- ಈ ವೇಳೆ ಮಹಿಳಾ ಆಯೋಗದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ ರೆಕಮಂಡೇಷನ್.
ಬೆಂಗಳೂರು (ಮೇ. 23): ಮಧ್ಯೆ ಮಲ್ಲೇಶ್ವರಂನಿಂದ ಜಯನಗರ ಕಡೆ ಹೊರಟ ಬೆಂಜ್ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮಲ್ಲೇಶ್ವರಂ ಆಸ್ಪತ್ರೆಗೆ ಹೋಗಿದ್ದೆ ಎಂದು ಕಾರಿನಲ್ಲಿದ್ದ ವ್ಯಕ್ತಿ ಹೇಳುತ್ತಾರೆ. ಆಸ್ಪತ್ರೆ ಸಿಬ್ಬಂದಿಗಳಿಗೆ ಕರೆ ಮಾಡಿ, ಖಚಿತವಾದರೆ ಬಿಡುತ್ತೇವೆ ಎಂದು ಪೊಲೀಸರು ಹೇಳುತ್ತಾರೆ. ಆ ವ್ಯಕ್ತಿ ಮಹಿಳಾ ಆಯೋಗದ ವ್ಯಕ್ತಿಗೆ ಕರೆ ಮಾಡಿ ಪ್ರಭಾವ ಬಳಸಲು ಯತ್ನಿಸಿದ್ದಾರೆ. ಇದಕ್ಕೆಲ್ಲಾ ಸೊಪ್ಪು ಹಾಕದ ಪೊಲೀಸರು ಕಾರನ್ನು ಸೀಜ್ ಮಾಡಿದ್ದಾರೆ.