ಬೆಳಗಾವಿಯಲ್ಲಿ (Belagavi) ಎಂಇಎಸ್ (MES) ಪುಂಡಾಟ ಮಿತಿ ಮೀರುತ್ತಿದೆ. ಕರ್ನಾಟಕದ ಬಸ್‌ಗಳ ಮೇಲೆ ಕಪ್ಪು ಮಸಿ ಬಳಿಯುವುದು, ಕಾರುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಡಿ. 19): ಬೆಳಗಾವಿಯಲ್ಲಿ (Belagavi) ಎಂಇಎಸ್ (MES) ಪುಂಡಾಟ ಮಿತಿ ಮೀರುತ್ತಿದೆ. ಕರ್ನಾಟಕದ ಬಸ್‌ಗಳ ಮೇಲೆ ಕಪ್ಪು ಮಸಿ ಬಳಿಯುವುದು, ಕಾರುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಪಿಎಸ್ ವಿಕೃತಿಯನ್ನು ಖಂಡಿಸಿ, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಾಳೆ ಬಂದ್‌ಗೆ ಕರೆ ನೀಡಿವೆ.
ಈ ಗಲಾಟೆ ಬಗ್ಗೆ ನಟ ಡಾಲಿ ಧನಂಜಯ್ (Dali Dhananjay) ಪ್ರತಿಕ್ರಿಯಿಸಿದ್ದಾರೆ. ' ಎಲ್ಲಾ ರಾಜ್ಯದವರು ಎಲ್ಲಾ ಕಡೆ ಇದ್ದೇವೆ. ಈ ರೀತಿ ಗಲಾಟೆ ಮಾಡುವುದು ಸರಿಯಲ್ಲ. ಒಂದಿಷ್ಟು ಜನರ ಪುಂಡಾಟಿಕೆಯಿಂದ ಅಮಾಯಕರ ಜೀವಕ್ಕೆ ತೊಂದರೆಯಾಗುತ್ತಿದೆ. ಇವೆಲ್ಲಾ ನಿಲ್ಲಬೇಕು. ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಪರ ನಡೆಯುವ ಹೋರಾಟಗಳಲ್ಲಿ ಇದ್ದೇ ಇರುವೆ' ಎಂದಿದ್ಧಾರೆ.