Dec 20, 2021, 3:54 PM IST
ಬೆಂಗಳೂರು (ಡಿ. 20): ಬೆಳಗಾವಿಯಲ್ಲಿ (Belagavi)ಎಂಇಎಸ್ (MES) ಶಿವಸೇನೆ (Shivasene)ಕಾರ್ಯಕರ್ತರ ಪುಂಡಾಟ, ಸಂಗೊಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ರಾಜ್ಯಾದ್ಯಂತಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
Belagavi Riot: ಕನ್ನಡ ಉಳಿವಿಗಾಗಿ ಶಿವಣ್ಣ ನಾಯಕತ್ವದಲ್ಲಿ ಹೋರಾಟ ನಡೆಸೋಣ: ಇಂದ್ರಜಿತ್ ಲಂಕೇಶ್
ಬೆಂಗಳೂರು, ಬೆಳಗಾವಿ ಸೇರಿದಂತೆ ಎಲ್ಲೆಡೆ ಬೀದಿಗಿಳಿದು ಪ್ರತಿಭಟನೆ, ರ್ಯಾಲಿ, ರಸ್ತೆ ತಡೆ ನಡೆಸಿದ ಕನ್ನಡಪರ ಹೋರಾಟಗಾರರು ಎಂಇಎಸ್ ನಿಷೇಧಕ್ಕೆ ಆಗ್ರಹಿಸಿದರು. ಜತೆಗೆ, ಕರ್ನಾಟಕ, ಕನ್ನಡಿಗರ ವಿರುದ್ಧ ಉದ್ಧಟತನದ ಹೇಳಿಕೆ ನೀಡಿದ ಶಿವಸೇನೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕಿದರು. ಈ ಘಟನೆಯ ಬಗ್ಗೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD Kumaraswamy) ಪ್ರತಿಕ್ರಿಯಿಸಿದ್ದಾರೆ.
'MES ದಾಂಧಲೆ ನಡೆಸುತ್ತಿದ್ದರೂ, ಸರ್ಕಾರ ಮೌನ ವಹಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುತ್ತಿರುವಾಗ, ಈ ಗಲಭೆ ನಡೆಯುತ್ತಿದೆ. ಭಯವೇ ಇಲ್ಲದಂತಾಗಿದೆ. ಸಿಎಂ ಕಠಿಣವಾದ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ಬಗ್ಗೆ ನಾನು ಉದ್ಧವ್ ಠಾಕ್ರೆಗೆ ಟ್ವೀಟ್ ಮಾಡಿದ್ದೇನೆ. ನಾಳೆ ಬೆಳಗಾವಿ ಸದನಕ್ಕೆ ಹೋಗಲಿದ್ದೇನೆ. ಅಲ್ಲಿಯೂ ಈ ಬಗ್ಗೆ ಧ್ವನಿ ಎತ್ತಲಿದ್ದೇನೆ' ಎಂದಿದ್ದಾರೆ.