- 17 ಮಂದಿ ಬಂದ ಮೇಲೆ ಗೊಂದಲ ಎಂಬ ಈಶ್ವರಪ್ಪ ಹೇಳಿಕೆಗೆ ಬಿಸಿ ಪಾಟೀಲ್ ಪ್ರತ್ಯುತ್ತರ
- 'ಹೊರಗಿನಿಂದ ಬಂದವರು, ಒಳಗಿನಿಂದ ಬಂದವರು ಎಂಬ ಪ್ರಶ್ನೆ ಇಲ್ಲ'
- 'ಭಿನ್ನಾಭಿಪ್ರಾಯಗಳನ್ನು ಅರುಣ್ ಜೀ ಸರಿಪಡಿಸುತ್ತಾರೆ'
ಬೆಂಗಳೂರು (ಜೂ. 16): ಬಿಜೆಪಿಗೆ 17 ಮಂದಿ ಬಂದ ಮೇಲೆ ಗೊಂದಲ ಎಂಬ ಹೇಳಿಕೆಗೆ ಬಿಸಿ ಪಾಟೀಲ್ ಪ್ರತ್ಯುತ್ತರ ಕೊಟ್ಟಿದ್ದಾರೆ.
'ಹೊರಗಿನಿಂದ ಬಂದವರು, ಒಳಗಿನಿಂದ ಬಂದವರು ಎಂಬ ಪ್ರಶ್ನೆ ಇಲ್ಲ. ಮನೆಗೆ ಒಂದು ಸಲ ಸೊಸೆ ಬಂದ ಮೇಲೆ ಮೊಳೆ ಹೊಡೆದುಕೊಂಡು ಬಂದ ಹಾಗೆ' ಎಂದಿದ್ದಾರೆ. ಇನ್ನು ಅರುಣ್ ಸಿಂಗ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ನಮ್ಮನ್ನೆಲ್ಲಾ ಬರ ಹೇಳಿದ್ದಾರೆ. ಯಾವ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಾರೋ ನೋಡಬೇಕು. ಭಿನ್ನಾಭಿಪ್ರಾಯಗಳು ಸಹಜ. ಅದನ್ನು ಅರುಣ್ ಜೀ ಸರಿಪಡಿಸುತ್ತಾರೆ' ಎಂದು ಬಿಸಿ ಪಾಟೀಲ್ ಹೇಳಿದ್ದಾರೆ.