ಬ್ರಿಟನ್‌ನಿಂದ ರಿಟರ್ನ್ ಆದವರಲ್ಲಿ 693 ಮಂದಿ ನಾಪತ್ತೆಯಾಗಿದ್ದು ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಇವರಲ್ಲಿ 220 ಮಂದಿ ಬೆಂಗಳೂರಿನವರು.
ಬೆಂಗಳೂರು (ಡಿ. 27): ಬ್ರಿಟನ್‌ನಿಂದ ರಿಟರ್ನ್ ಆದವರಲ್ಲಿ 693 ಮಂದಿ ನಾಪತ್ತೆಯಾಗಿದ್ದು ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಇವರಲ್ಲಿ 220 ಮಂದಿ ಬೆಂಗಳೂರಿನವರು. ನಾಪತ್ತೆಯಾಗಿರುವವರು ತಾವಾಗಿಯೇ ಸ್ಥಳೀಯ ಸರ್ಕಾರಿ ಆಸ್ಪತ್ರೆ, ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಅವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಸಿದ್ದಾರೆ.