BBMP ನಿರ್ಲಕ್ಷ್ಯಕ್ಕೆ ಬೆಂಗಳೂರಲ್ಲಿ ಮತ್ತೊಂದು ಬಲಿ..!

Jul 18, 2020, 1:38 PM IST

ಬೆಂಗಳೂರು(ಜು.18): ಒಂದೇ ಮನೆಯಲ್ಲಿ ಮೂರು ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಮೂರ್ನಾಲ್ಕು ದಿನಗಳಿಂದಲೂ ಬಿಬಿಎಂಪಿಗೆ ಒಂದೇ ಸಮನೆ ಕರೆ ಮಾಡುತ್ತಿದ್ದರು ಕ್ಯಾರೇ ಅನ್ನುತ್ತಿಲ್ಲ. ಇದೀಗ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಬಡಜೀವ ಬಲಿಯಾಗಿದೆ.

ಆಗ ಬರ್ತಿವಿ, ಈಗ ಬರ್ತೀವಿ ಎಂದು ಬಿಬಿಎಂಪಿ ಸಿಬ್ಬಂದಿಗಳು ಕಾಲಹರಣ ಮಾಡಿದ್ದಾರೆ. ನಾಲ್ಕುದಿನಗಳ ಕಾಲ ನರಳಾಡಿ ಮಹಿಳೆಯೊಬ್ಬರು ಪ್ರಾಣಬಿಟ್ಟಿದ್ದಾರೆ. ವಿವಿ ಪುರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು,ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.

ಪೊಲೀಸ್ ಇಲಾಖೆಗೂ ಬಿಬಿಎಂಪಿ ಮೇಲೆ ನಂಬಿಕೆ ಇಲ್ವಾ?

ಮನೆಯಲ್ಲಿ ಮೂರು ಜನ ಇದ್ಧೇವೆ, ನಮಗೆ ಕೊರೋನಾ ಇದೆ ಆಸ್ಪತ್ರೆಗೆ ಕರ್ಕೊಂಡು ಹೋಗಿ ಎಂದು ಅಂಗಲಾಚಿದರು, ಬಿಬಿಎಂಪಿ ಕ್ಯಾರೇ ಅಂದಿಲ್ಲ. ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಬಿಬಿಎಂಪಿ ಸಬೂಬು ಹೇಳಿದೆ. ಉಸಿರಾಟದ ಸಮಸ್ಯೆಯಿಂದ ಮಹಿಳೆಯೊಬ್ಬರು ಪ್ರಾಣಬಿಟ್ಟಿದ್ದಾರೆ. ಇದೀಗ ಮಗ ಹಾಗೂ ಸೊಸೆಯನ್ನು ಕ್ವಾರಂಟೈನ್ ಮಾಡಲಾಗಿದೆ. ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಅಮಾಯಕರು ಬಲಿಯಾಗುತ್ತಿದ್ದು, ಈ ಸಾವು ನ್ಯಾಯವೇ ಎನ್ನುವ ಪ್ರಶ್ನೆ ಶುರುವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.