ಆಂಬ್ಯುಲೆನ್ಸ್ ಇಟ್ಟುಕೊಂಡು ಬಿಬಿಎಂಪಿ ಚೆಲ್ಲಾಟ..!

Jul 22, 2020, 4:17 PM IST

ಬೆಂಗಳೂರು(ಜು.22): ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸ ಜೋರಾಗಿದೆ. ಕೊರೋನಾ ಬೆಂಗಳೂರಿಗೆ ವಕ್ಕರಿಸಿ ನಾಲ್ಕು ತಿಂಗಳುಗಳೇ ಕಳೆದರೂ ಬಿಬಿಎಂಪಿ ಮಾತ್ರ ಪಾಠ ಕಲಿತಂತೆ ಕಾಣುತ್ತಿಲ್ಲ.

ಕೊರೋನಾ ನಿಯಂತ್ರಣದ ವಿಚಾರದಲ್ಲಿ ಬಿಬಿಎಂಪಿ ಯಡವಟ್ಟಿನ ಮೇಲೆ ಯಡವಟ್ಟು ಮಾಡಿಕೊಳ್ಳುತ್ತಿದೆ. ಅತ್ತ ಆಂಬ್ಯುಲೆನ್ಸ್ ಸಿಗದೇ ಕೊರೋನಾ ರೋಗಿಗಳು ಸಾಲು ಸಾಲು ಸಾವನ್ನಪ್ಪುತ್ತಿದ್ದಾರೆ, ಮತ್ತೊಂದೆಡೆ ಆಂಬ್ಯುಲೆನ್ಸ್ ಇಟ್ಟುಕೊಂಡು ಬಿಬಿಎಂಪಿ ಚೆಲ್ಲಾಟವಾಡುತ್ತಿದೆ.

ಕೋವಿಡ್‌ಯೇತರ ರೋಗಿಗೆ ಚಿಕಿತ್ಸೆ ನೀಡಲು ನಕಾರ; ರೊಚ್ಚಿಗೆದ್ದ ಜನರು ಮಾಡಿದ್ದೇನು ನೋಡಿ..!

ಹೌದು, ಬಾಡಿಗೆಯಿಲ್ಲದೇ ಖಾಸಗಿ ವಾಹನಗಳು ಖಾಲಿ ಖಾಲಿಯಾಗಿ ನಿಂತಿವೆ. ಜೆಸಿ ರಸ್ತೆಯಲ್ಲಿ ಸಾಲು ಸಾಲಾಗಿ ಟಿಟಿ ವಾಹನ ನಿಂತುಕೊಂಡಿವೆ. ಊಟ ಕೊಡಿ, ಇಲ್ಲವೇ ಬಾಡಿಗೆಯಾದ್ರೂ ಕೊಡಿ ಎಂದು ಚಾಲಕರು ಕೇಳುತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.