ಮಾತು ವಾಪಸ್ ಪಡೆಯದಿದ್ದರೆ ಸೋಲು, ಬಿಜೆಪಿ ನೋಟಿಸ್ ಬೆನ್ನಲ್ಲೇ ಯತ್ನಾಳ್‌ಗೆ ಸ್ವಾಮೀಜಿ ಶಾಪ!

Dec 2, 2024, 10:43 PM IST

ಬೀದರ್(ಡಿ.02) ವಕ್ಫ್ ವಿರುದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಇದರ ಜೊತೆಗೆ ರಾಜ್ಯ ಬಿಜೆಪಿ ನಾಯಕರ ವಿರುದ್ದ ಬಂಡೆದ್ದಿರುವ ಯತ್ನಾಳ್‌ಗೆ ನೋಟಿಸ್ ನೀಡಿದೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ  ಗುರು ಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ  ಸ್ವಾಮೀಜಿ ಖಡಕ್ ಎಚ್ಚರಿ ನೀಡಿದ್ದಾರೆ. ಬಸವಣ್ಣನವರ ಕುರಿತು ಆಡಿದ ಮಾತುಗಳನ್ನು ವಾಪಸ್ ಪಡೆಯಲು ಒತ್ತಾಯಿಸಿದ್ದಾರೆ. ಮಾತು ವಾಪಸ್ ಪಡೆದರೆ ಮುಂದಿನ ಚುನಾವಣೆಯಲ್ಲಿ ಗೆದ್ದು ಬರ್ತಿಯಾ, ಇಲ್ಲದಿದ್ದರೆ ಬಿದ್ದು ಹೋಗ್ತಿಯಾ ಎಂದು ಎಚ್ಚರಿಸಿದ್ದಾರೆ.