ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ರನ್ನು ಜಯಮೃತ್ಯುಂಜಯ ಸ್ವಾಮೀಜಿ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಬೆಂಗಳೂರು (ಜೂ. 18): ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ರನ್ನು ಜಯಮೃತ್ಯುಂಜಯ ಸ್ವಾಮೀಜಿ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
'ಮುಖ್ಯಮಂತ್ರಿಗಳನ್ನು ಉಳಿಸುವ ಅಧಿಕಾರ, ಬದಲಾಯಿಸುವ ಅಧಿಕಾರ ಇರುವುದು ಶಾಸಕಾಂಗ ಸಭೆಗೆ ಮಾತ್ರ. ನಾವು ಮಠಾಧೀಶರು ಈ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ. ವರಿಷ್ಠರು ನಮ್ಮ ಸಲಹೆ ಕೇಳಿದರೆ ಕೊಡುತ್ತೇವೆ. ಸಿಎಂ ಬದಲಾವಣೆ ವಿಚಾರವಾಗಿ ನಾವು ಒತ್ತಡ ಹಾಕುವುದಿಲ್ಲ' ಎಂದು ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.