Dec 3, 2020, 3:41 PM IST
ಬೆಂಗಳೂರು(ಡಿ.03): ಮಹಾಮಾರಿ ಕೊರೋನಾ ಎಫೆಕ್ಟ್‌ನಿಂದ ಹೊಸ ವರ್ಷಾಚರಣೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಅದರೆ, ನ್ಯೂ ಇಯರ್ ಸೆಲೆಬ್ರೇಷನ್ ಬ್ಯಾನ್‌ನಿಂದ ಅಬಕಾರಿ ಇಲಾಖೆಗೆ ಭಾರೀ ನಷ್ಟ ಉಂಟಾಗಲಿದೆ. ಡಿಸೆಂಬರ್ 25 ರಿಂದ 31 ರ ವರೆಗೆ ದುಪ್ಪಟ್ಟು ಮಾರಾಟವಾಗಲಿದೆ. ಸೆಲೆಬ್ರೇಷನ್ ಬ್ಯಾನ್ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಖೋತಾ ಬೀಳಲಿದೆ.
ಸಚಿವ ಸಂಪುಟ ವಿಸ್ತರಣೆ: ಬಿಜೆಪಿ ಶಾಸಕರು, ಸಚಿವರಿಗೆ ಕಟೀಲ್ ಎಚ್ಚರಿಕೆ..!
ಅಬಕಾರಿ ಇಲಾಖೆಗೆ ನಷ್ಟವಾಗುತ್ತೆ ಅಂತ ಹೊಸ ವರ್ಷಾಚರಣೆಗೆ ಬ್ರೇಕ್ ನೀಡದೇ ಇದ್ದಲ್ಲೀ ಭಾರೀ ಪ್ರಮಾಣದಲ್ಲಿ ಜೀವಹಾನಿ ಉಂಟಾಗುವ ಸಾದ್ಯತೆ ಇದೆ. ಇದರಿಂದ ಕೊರೋನಾ ಮತ್ತಷ್ಟು ಹರಡುವ ಸಾಧ್ಯತೆ ಇದೆ. ಹೀಗಾಗಿ ಇ ವರ್ಷ ನ್ಯೂ ಇಯರ್ ಸೆಲೆಬ್ರೇಷನ್ ಬ್ಯಾನ್ ಮಾಡುವ ಸಾದ್ಯತೆ ಇದೆ.