
ಬಾಗಲಕೋಟೆ ದುರ್ಗಾ ಕಾಲೋನಿಯಲ್ಲಿ 200ಕ್ಕೂ ಹೆಚ್ಚು ಸ್ಲಂ ನಿವಾಸಿಗಳು ಮನೆಗಾಗಿ ಕಾದಿದ್ದಾರೆ. 2019ರಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ 270 ಮನೆ ಕಟ್ಟುವ ಯೋಜನೆ ಆರಂಭಿಸಿದರೂ, ಅರ್ಧಕ್ಕೆ ಬಿಟ್ಟಿರುವ ಗುತ್ತಿಗೆದಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನೆಗಳು ಅಸಂಪೂರ್ಣ.
ಬಾಗಲಕೋಟೆ ದುರ್ಗಾ ಕಾಲೋನಿಯಲ್ಲಿ 200ಕ್ಕೂ ಹೆಚ್ಚು ಸ್ಲಂ ನಿವಾಸಿಗಳು ಮನೆಗಾಗಿ ಕಾದಿದ್ದಾರೆ. 2019ರಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ 270 ಮನೆ ಕಟ್ಟುವ ಯೋಜನೆ ಆರಂಭಿಸಿದರೂ, ಅರ್ಧಕ್ಕೆ ಬಿಟ್ಟಿರುವ ಗುತ್ತಿಗೆದಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮನೆಗಳು ಅಸಂಪೂರ್ಣ. ಪ್ರತಿ ಮನೆಗೆ 4.8 ಲಕ್ಷ ಅನುದಾನ, ಜೊತೆಗೆ ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ಸಂಗ್ರಹವಾದರೂ ಫಲಿತಾಂಶ ಶೂನ್ಯ. ಮನೆ-ಹಣ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಜನ, ಹಕ್ಕುಪತ್ರ ಹಾಗೂ ಮನೆ ಕೊಡದಿದ್ದರೆ ಉಗ್ರ ಹೋರಾಟ ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿ ಕ್ರಮಕ್ಕೆ ಭರವಸೆ ನೀಡಿದ್ದಾರೆ.