ಆಜಾನ್ ಧ್ವನಿವರ್ಧಕದ ಶಬ್ಧ ಇನ್ನೂ ನಿಂತಿಲ್ಲ. ಹೀಗಾಗಿ ಮೇ 9ರಿಂದ 1 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಸುಪ್ರಭಾತ, ಓಂಕಾರ, ಭಜನೆ, ಹನುಮಾನ ಚಾಲೀಸಾ ಪಠಣ ಮಾಡಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ (Pramod Mutalik) ಹೇಳಿದ್ದಾರೆ.
ಬೆಂಗಳೂರು (ಮೇ. 06): ಆಜಾನ್ ಧ್ವನಿವರ್ಧಕದ ಶಬ್ಧ ಇನ್ನೂ ನಿಂತಿಲ್ಲ. ಹೀಗಾಗಿ ಮೇ 9ರಿಂದ 1 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಸುಪ್ರಭಾತ, ಓಂಕಾರ, ಭಜನೆ, ಹನುಮಾನ ಚಾಲೀಸಾ ಪಠಣ ಮಾಡಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ (Pramod Mutalik) ಹೇಳಿದ್ದಾರೆ.
News Hour ಜೈಲಿಗೆ ಹೋಗ್ತೀನಿ, ವಿಚಾರಣೆಗೆ ಹೋಗಲ್ಲ, ಪ್ರಿಯಾಂಕ್ ಖರ್ಗೆ ಹೊಸ ವರಸೆಗೆ ಕಾಂಗ್ರೆಸ್ ಬೆಂಬಲ!
ಸುಪ್ರೀಂಕೋರ್ಟ್ (Supreme Court) ಆದೇಶ ಉಲ್ಲಂಘನೆ ನಿರಂತರವಾಗಿ ಆಗುತ್ತಿದೆ. ತಹಸೀಲ್ದಾರ್, ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದು ಯಾವುದೇ ಕ್ರಮ ಆಗಿಲ್ಲ. ಕೇವಲ ನೋಟಿಸ್ ಕೊಡುವ ಕೆಲಸ ಆಗಿದೆ. ಶಬ್ದದಿಂದ ಆಗುವ ದೊಡ್ಡ ತೊಂದರೆ ನಿಂತಿಲ್ಲ. ಹೀಗಾಗಿ ಎಲ್ಲ ಹಿಂದು ಸಂಘಟನೆ ಸಭೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ಆಜಾನ್‌ಗೆ ನಮ್ಮ ವಿರೋಧವಿಲ್ಲ, ಮೈಕ್ ಶಬ್ಧದ ಕಿರಿಕಿರಿ ವಿರುದ್ಧ ನಮ್ಮ ಹೋರಾಟ, ಸರ್ಕಾರ, ಮುಸ್ಲಿಂ ಮಾನಸಿಕತೆಯ ವಿರುದ್ಧ ನಮ್ಮ ಹೋರಾಟ. ನಮ್ಮ ವಿರುದ್ಧ ಕ್ರಮಕ್ಕೆ ಮುಂದಾದರೆ ಸಂಘರ್ಷ ಎದುರಿಸಬೇಕಾಗುತ್ತದೆ. ಸರ್ಕಾರ ಕೂಡಲೇ ಯುಪಿ ಮಾದರಿಯಲ್ಲಿ ಮೈಕ್ ಕೆಳಗೆ ಇಳಿಸಬೇಕು. ಮುಖ್ಯಮಂತ್ರಿ ಧೈರ್ಯ ತೆಗೆದುಕೊಂಡು ಮೈಕ್ ಹಿಂತೆಗೆಸಬೇಕು ಎಂದರು.