Aug 30, 2020, 1:32 PM IST
ಕೊಡಗು (ಆ. 30): ಕಳೆದ ಕೆಲ ವರ್ಷಗಳಿಂದ ಕೊಡಗಿನಲ್ಲಿ ಏನಾದರೊಂದು ಅವಾಂತರ ಆಗುತ್ತಲೇ ಇರುತ್ತದೆ. ಭೀಕರ ಪ್ರವಾಹ, ಮನೆ ಕುಸಿತ, ಆಸ್ತಿ ಹಾನಿ ಹೀಗೆ. ಈ ವರ್ಷ ಬ್ರಹ್ಮಗಿರಿ ಬೆಟ್ಟ ಕುಸಿದು ಮಹಾ ದುರಂತವೇ ನಡೆದು ಹೋಯಿತು. ಇದಕ್ಕೆ ಏನೆಲ್ಲಾ ವೈಜ್ಞಾನಿಕ ಕಾರಣಗಳನ್ನು ಹುಡುಕಿದರೂ, ಬಲವಾದ ಕಾರಣವೊಂದಿದೆ. ಕಾವೇರಮ್ಮನಿಗೆ ಅಪಚಾರವಾಗಿದ್ದೇ ಕಾರಣ ಎನ್ನುತ್ತದೆ ಅಷ್ಟಮಂಗಲ.
ಕಾವೇರಮ್ಮನ ಹುಟ್ಟಿನ ಮೂಲವನ್ನು ಬದಲಾಯಿಸಿದ್ದೇ ಇದಕ್ಕೆ ಕಾರಣವಂತೆ. ಬ್ರಹ್ಮಗಿರಿ ಬೆಟ್ಟದಲ್ಲಿ ಹುಟ್ಟುವ ಕಾವೇರಿ ತಾಯಿ ನಂತರ ಅಂತರ್ಗಾಮಿಯಾಗಿ ಹರಿದು ಭಾಗಮಂಡಲದಲ್ಲಿ ಸಹೋದರಿಯರ ಜೊತೆ ಸೇರುತ್ತಾಳೆ. ಈ ಮೂಲವನ್ನು ಬದಲಾಯಿಸಿದ್ದೇ ಆಕೆಯ ಮುನಿಸಿಗೆ ಕಾರಣ ಎನ್ನಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಪರಿಹಾರಕ್ಕಾಗಿ ಕುಟುಂಬ ಕಲಹ; 'ಚಿಕ್ಕಪ್ಪನ ಪರಿಹಾರ ನಮಗೆ ಕೊಡಿ' ಎಂದ ಅರ್ಚಕರ ಪುತ್ರಿಯರು