Dec 18, 2021, 12:40 PM IST
ಬೆಂಗಳೂರು (ಡಿ. 18): ಸಚಿವ ಬೈರತಿ ಬಸವರಾಜು (Byrathi Basavaraju) 22 ಎಕರೆ ಭೂಮಿಯನ್ನು ಕಬಳಿಕೆ ( Land Encroached) ಮಾಡಿದ್ದಾರೆ ಎಂಬ ಆರೋಪವನ್ನು ಮಾಡಿರುವ ಕಾಂಗ್ರೆಸ್, ಬಸವರಾಜು ಅವರ ತಲೆದಂಡಕ್ಕೆ ಒತ್ತಾಯಿಸಿದೆ. ಸಚಿವರು ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ರಾಜೀನಾಮೆ ನೀಡಬೇಕು. ರಾಜೀನಾಮೆ (Resignation) ನೀಡುವವರೆಗೂ ಸದನದಲ್ಲಿ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆಗ್ರಹಿಸಿದ್ಧಾರೆ
Belagavi Session: ಭೈರತಿ ಬಸವರಾಜ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು, ಅಧಿವೇಶನದಲ್ಲಿ ಕೋಲಾಹಲ
ಏನಿದು ಪ್ರಕರಣ..?
ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್.ಪುರ ಹೋಬಳಿಯ ಕಲ್ಕೆರೆ ಗ್ರಾಮದ ಸರ್ವೇ ನಂಬರ್ 375/2ರಲ್ಲಿನ 22.43 ಎಕರೆ ಜಾಗ ಅದೂರ್ ಅಣ್ಣೈಯಪ್ಪ ಎಂಬುವರಿಗೆ ಸೇರಿದ್ದಾಗಿದೆ. ಅಣ್ಣೈಯಪ್ಪ ಸಹಿಯನ್ನು ಫೋರ್ಜರಿ ಮಾಡಿ ಅವರ ಸಂಬಂಧಿಕರಾದ ಮಾದಪ್ಪ ಮತ್ತು ಪಿಲ್ಲಮಾದಪ್ಪ ಎಂಬುವರು ಶಾಸಕ ಬೈರತಿ ಬಸವರಾಜ್ ಅವರಿಗೆ 2003ರ ಮೇ 21ರಂದು ಅಕ್ರಮವಾಗಿ ಭೂಮಿ ಮಾರಾಟ ಮಾಡಿದ್ದಾರೆ. ಈ ಆಸ್ತಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಟ್ಟಿದಾರೆ ಎಂದು ಆರೋಪಿಸಿ ಅಣ್ಣೈಯಪ್ಪ ಪುತ್ರ ಮಾದಪ್ಪ ದೂರು ದಾಖಲಿಸಿದ್ದರು. 42ನೇ ಎಸಿಎಂಎಂ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿ, ಈ ಕುರಿತು ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ. ಜತೆಗೆ, ಬೈರತಿ ಬಸವರಾಜ್ ಸೇರಿದಂತೆ ಐವರು ಆರೋಪಿಗಳಿಗೆ 2021ರ ನ.25ರಂದು ಸಮನ್ಸ್ ಜಾರಿ ಮಾಡಿದೆ.