Dec 12, 2021, 5:27 PM IST
ಬೆಂಗಳೂರು (ಡಿ, 12): ಮತಾಂತರ ನಿಷೇಧ ಕಾಯ್ದೆ (Anti Conversion Bill) ಮಂಡನೆ ಮಾಡುವ ರಾಜ್ಯ ಸರ್ಕಾರದ ಘೋಷಣೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ನಾಯಕರ ನಡುವೆ ಮಾತಿನ ಜಟಾಪಟಿಗೆ ಕಾರಣವಾಗಿದೆ.
Assembly Election 2023: ಆಪ್ತರಿಂದ ಓಪನ್ ಆಫರ್, ಸಿದ್ದು ಸ್ಪರ್ಧೆ ಎಲ್ಲಿಂದ.?
ಮತಾಂತರ ನಿಷೇಧ (ತಿದ್ದುಪಡಿ) ಕಾಯ್ದೆಯನ್ನು ಬೆಳಗಾವಿ (Belagavi) ಅಧಿವೇಶನದಲ್ಲೇ ಮಂಡನೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಸಿದ್ದರಾಮಯ್ಯ (Siddaramaiah) ಸೇರಿದಂತೆ ಪ್ರಮುಖ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿ ನಾಯಕರು ಸರ್ಕಾರದ ಸಮರ್ಥನೆಗೆ ಇಳಿದಿದ್ದಾರೆ. ಈ ನಡುವೆ, ಕ್ರೈಸ್ತ ಸಮುದಾಯದ ಮುಖಂಡ ರೊನಾಲ್ಡ್ ಕೊಲಾಸೋ ನೇತೃತ್ವದ ಕೈಸ್ತ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡದಂತೆ ಮನವಿ ಮಾಡಿದೆ. ಕೆಲ ಮುಸ್ಲಿಂ ಸಂಘಟನೆಗಳು ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸಿವೆ.