ಅಧಿಕಾರಿಗಳು ರಥೋತ್ಸವ ನಡೆಸಬೇಡಿ ಅಧಿಕಾರಿಗಳು ಸೂಚಿಸಿದ್ದರು. ಆದರೆ ಅಧಿಕಾರಿಗಳ ಮಾತನ್ನು ಲೆಕ್ಕಿಸದೇ ಜನರು ಜಾತ್ರೆ ನಡೆಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಕಲಬುರಗಿ(ಏ.18): ಕೊರೋನಾ ಭೀತಿಯಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಹೀಗಿರುವಾಗ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭುಸನೂರು ಗ್ರಾಮದ ಜನ ಹನುಮಾನ್ ರಥೋತ್ಸವ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಿನ್ನೆಯಷ್ಟೇ ಚಿತ್ತಾಪುರ ತಾಲೂಕಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಇದೀಗ ಆಳಂದ ತಾಲೂಕಿನಲ್ಲಿ ಏಪ್ರಿಲ್ 15ರಂದು ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಅಧಿಕಾರಿಗಳು ರಥೋತ್ಸವ ನಡೆಸಬೇಡಿ ಅಧಿಕಾರಿಗಳು ಸೂಚಿಸಿದ್ದರು. ಆದರೆ ಅಧಿಕಾರಿಗಳ ಮಾತನ್ನು ಲೆಕ್ಕಿಸದೇ ಜನರು ಜಾತ್ರೆ ನಡೆಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.