Jun 17, 2023, 11:21 PM IST
ಬೆಂಗಳೂರು (ಜೂ.17): ರಾಜ್ಯಾದ್ಯಂತ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯಾದ ಶಕ್ತಿ ಜಾರಿಯಾದ ಬಳಿಕ ಇದು ಮೊದಲ ವೀಕೆಂಡ್. ನಿರೀಕ್ಷೆಯಂತೆ ಸರ್ಕಾರಿ ಬಸ್‌ಗಳಿಗೆ ಶಕ್ತಿ ಯೋಜನೆಯ ಎಫೆಕ್ಟ್ ತಟ್ಟಿದೆ. ರೈಲ್ವೆ ಪ್ರಯಾಣಿಕರಲ್ಲೂ ಶೇ.20ರಷ್ಟು ಇಳಿಮುಖವಾಗಿದೆ.
ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಅತೀವ ಏರಿಕೆಯಾಗಿದೆ. ಈ ಮುನ್ನ ನಾಲ್ಕೂ ನಿಗಮಗಳಿಂದ ಪ್ರತಿದಿನ ಸರಾಸರಿ 75-80 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರೆ, ಯೋಜನೆ ಜಾರಿಯಾದ ಬಳಿಕ ಸರಾಸರಿ 1.16 ಕೋಟಿಗೆ ಏರಿಕೆಯಾಗಿದೆ.
ಮಹಿಳೆಯರ 'ಶಕ್ತಿ'ಗೆ ಮುರಿದುಬಿದ್ದ ಬಸ್ ಡೋರ್: ಕಂಡಕ್ಟರ್ ಪರದಾಟ
ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಅಕ್ಕಿ ಪಾಲಿಟಿಕ್ಸ್ ಮುಂದಿನ ವಾರ ಇನ್ನೊಂದು ಹಂತಕ್ಕೇರಲಿದೆ. ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ 20ರಂದು ಕಾಂಗ್ರೆಸ್ ಪಕ್ಷ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಯನ್ನು ಮಾಡಲಿದೆ.