ಅಮರನಾಥದಲ್ಲಿ ಸಿಲುಕಿರುವ  ನೂರು ಕನ್ನಡಿಗರೂ ಸೇಫ್: ಸಿಎಂ ಬೊಮ್ಮಾಯಿ

ಅಮರನಾಥದಲ್ಲಿ ಸಿಲುಕಿರುವ ನೂರು ಕನ್ನಡಿಗರೂ ಸೇಫ್: ಸಿಎಂ ಬೊಮ್ಮಾಯಿ

Published : Jul 09, 2022, 03:36 PM IST

ಅಮರನಾಥದಲ್ಲಿ ಮೇಘಸ್ಪೋಟದಲ್ಲಿ ನೂರು ಕನ್ನಡಿಗರು ಸಿಲುಕಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಮುಖ್ಯ ಕಾರ್ಯದರ್ಶಿ ರಕ್ಷಣಾ ಕಾರ್ಯದ ವಿಚಾರವಾಗಿ ಕೇಂದ್ರದ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು (ಜುಲೈ 9): ಅಮರನಾಥದ (Amarnath) ಗುಹೆಯ (Holy Cave) ಸಮೀಪ ಶುಕ್ರವಾರ ಸಂಜೆ ಸಂಭವಿಸಿದ ಭಾರೀ ಮೇಘಸ್ಫೋಟದಲ್ಲಿ (Cloudburst) ಈವರೆಗೂ 16 ಮಂದಿ ಸಾವನ್ನಪ್ಪಿದ್ದಾರೆ. ಈ ವೇಳೆ ರಾಜ್ಯದ ಜನರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಸಹಾಯವಾಣಿಯನ್ನೂ ಆರಂಭಿಸಿದೆ.

ಒಟ್ಟು 100 ಮಂದಿ ಕನ್ನಡಿಗರು ಅಮರನಾಥದಲ್ಲಿದ್ದು ಇವರೆಲ್ಲರೂ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj bommai) ತಿಳಿಸಿದ್ದಾರೆ. ರಾಜ್ಯದ ಜನರನ್ನು ಸುರಕ್ಷಿತವಾಗಿ ಕರೆತರುವ ಬಗ್ಗೆ ಕೇಂದ್ರದ ಜೊತೆ ಮುಖ್ಯ ಕಾರ್ಯದರ್ಶಿ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ನಾವು ಸೇಫ್‌ ಇದ್ದೇವೆ, ಆರ್ಮಿಯವರು ಚೆನ್ನಾಗಿ ನೋಡಿಕೊಂಡರು: ಶಿವಮೊಗ್ಗದ ಮಹಿಳಾ ತಂಡ

ಮೈಸೂರು, ಶಿವಮೊಗ್ಗ ಹಾಗೂ ಬೀದರದ ಯಾತ್ರಾರ್ಥಿಗಳು ಸೇಫ್‌ ಅಗಿರುವ ಬಗ್ಗೆ ಶುಕ್ರವಾರವೇ ಮಾಹಿತಿ ಸಿಕ್ಕಿತ್ತು. ಸರ್ಕಾರ ನೀಡಿರುವ ಹೆಲ್ಪ್‌ಲೈನ್‌ಗೆ ಈಗಾಗಲೇ 15 ರಿಂದ 20 ಮಂದಿ ಕರೆ ಮಾಡಿ ತಾವಿರುವ ಸ್ಥಳವನ್ನು ತಿಳಿಸಿದ್ದು ಅವರ ರಕ್ಷಣೆಗೂ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
Read more