ದುಬೈನಿಂದ ಮಂಗಳೂರಿಗೆ ಆಗಮಿಸಲಿದೆ ಮತ್ತೊಂದು ವಿಮಾನ

May 18, 2020, 1:35 PM IST

ಮಂಗಳೂರು(ಮೇ.18): ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಹೊತ್ತು ವಿಮಾನ ಇಂದು ಮಂಗಳೂರಿಗೆ ಬಂದಿಳಿಯಲಿದೆ. ದುಬೈನಿಂದ ಹೊರಟ ವಿಮಾನ ಮಂಗಳೂರಿಗೆ ಬಂದಿಳಿಯಲಿದೆ.

ದುಬೈನಿಂದ ಅನಿವಾಸಿ ಭಾರತೀಯರ ಏರ್‌ಲಿಫ್ಟ್ ಮಾಡಲಿದ್ದು, 35  ಗರ್ಭಿಣಿಯರು ಸೇರಿದಂತೆ 173 ಪ್ರಯಾಣಿಕರು ಮಂಗಳೂರಿಗೆ ಬಂದಿಳಿಯಲಿದ್ದಾರೆ. ದಕ್ಷಿಣ ಕನ್ನಡದ 75, ಉಡುಪಿಯ 63, ಬೆಂಗಳೂರಿನ 25 ಮಂದಿ ರಾಜ್ಯಕ್ಕೆ ಬಂದಿಳಿಯಲಿದ್ದಾರೆ.

ಕೊರೋನಾದಿಂದ ದೇಶದಲ್ಲಿ ಹೆಚ್ಚಾಯ್ತು ಬಡತನ..!

ದುಬೈನಲ್ಲಿ 23 ಜನರಿಗೆ ಟೆಸ್ಟ್ ಮಾಡಲಾಗಿದ್ದು, ಅವರೆಲ್ಲರ ವರದಿ ನೆಗೆಟಿವ್ ಬಂದಿದೆ. ಮಂಗಳೂರಿಗೆ ಏರ್‌ಲಿಫ್ಟ್ ಮೂಲಕ ಬಂದಿಳಿಯಲಿರುವ ಎರಡನೇ ವಿಮಾನವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.